ಗಾಳಿ-ಮಳೆ: ಬೋಳ ಗ್ರಾಮದಲ್ಲಿ ಅಡಿಕೆ ಬೆಳೆಗೆ ಹಾನಿ
ಉಡುಪಿ: ಮಂಗಳವಾರ ಸಂಜೆ ಬೀಸಿದ ಭಾರೀ ಗಾಳಿಗೆ ಕಾರ್ಕಳ ತಾಲೂಕು ಬೋಳ ಗ್ರಾಮದ ಜಯರಾಮ್ ಸಾಲಿಯಾನ್ ಎಂಬವರ ಅಡಿಕೆ ತೋಟಕ್ಕೆ ಭಾರೀ ಪ್ರಮಾಣದ ಹಾನಿಯಾಗಿದೆ. ಇದರಿಂದ 25ಸಾವಿರ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಗಾಳಿ-ಮಳೆಯಿಂದ ಕುಂದಾಪುರ ತಾಲೂಕಿನಲ್ಲಿ ಎರಡು ಮನೆಗಳಿಗೆ ಹಾನಿಯಾಗಿರುವ ವರದಿಗಳು ಇಲ್ಲಿಗೆ ಬಂದಿವೆ. ಗಂಗೊಳ್ಳಿ ಗ್ರಾಮದ ಜಗನ್ನಾಥ ಖಾರ್ವಿ ಎಂಬವರ ಮನೆಗೆ 20ಸಾವಿರ ರೂ.ನಷ್ಟು ನಷ್ಟ ಸಂಭವಿ ಸಿದ್ದರೆ, ಅಂಪಾರು ಗ್ರಾಮದ ಶೀನಪ್ಪ ಶೆಟ್ಟಿ ಅವರ ಮನೆ ಮೇಲೆ ಮರ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಭಾರೀ ಮಳೆಯ ಮುನ್ಸೂಚನೆ: ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಅಲ್ಲದೇ ಕರಾವಳಿ ತೀರದಲ್ಲಿ ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೂ ಬೀಸುವ ಸಾದ್ಯತೆ ಇದೆ. ಇಂದು ಅಪರಾಹ್ನದ ಬಳಿಕ ಉಡುಪಿ ಜಿಲ್ಲೆಯಾದ್ಯಂತ ಬಾರೀ ಮಳೆಯಾಗುತ್ತಿರುವ ವರದಿಗಳು ಬಂದಿವೆ. ಹಲವು ಕಡೆಗಳಲ್ಲಿ ಮಳೆಯೊಂದಿಗೆ ವೇಗದ ಗಾಳಿಯೂ ಬೀಸುತ್ತಿದೆ. ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಹಾಗೂ ಮರಗಳು ಧರಾಶಾಹಿಯಾದ ಮಾಹಿತಿ ಇಲ್ಲಿಗೆ ಬರುತ್ತಿವೆ.