×
Ad

"ಕೋಮು ಸೌಹಾರ್ದತೆ ಕೆಡಿಸುವವರ ವಿರುದ್ಧ ಕಠಿಣಕ್ರಮಕ್ಕೆ ಆಗ್ರಹ"

Update: 2025-07-02 20:27 IST

ಉಡುಪಿ, ಜು.2: ಕರಾವಳಿಯಲ್ಲಿ ಸೌಹಾರ್ದತೆಯನ್ನು ಮರುಸ್ಥಾಪಿಸುವ ಪ್ರಯತ್ನದ ಅಂಗವಾಗಿ ಕರಾವಳಿ ಜಿಲ್ಲೆಗಳ ವಿವಿಧ ಸಂಘಟನೆ, ಧಾರ್ಮಿಕ ಮುಖಂಡರು ಹಾಗೂ ವಿವಿಧ ವರ್ಗಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಲು ಉಡುಪಿಗೆ ಆಗಮಿಸಿರುವ ಕೆಪಿಸಿಸಿಯಿಂದ ನಿಯೋಜಿತ ಗೊಂಡಿರುವ ನಿಯೋಗ ಬ್ರಹ್ಮಗಿರಿಯಲ್ಲಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿತು.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ, ಶಾಂತಿ-ನೆಮ್ಮದಿಯನ್ನು ಸ್ಥಿರಗೊಳಿಸಲು ಬೇಕಾದ ಮಾರ್ಗೋ ಪಾಯ ಕಂಡುಕೊಳ್ಳಲು ರಚಿಸಲ್ಪಟ್ಟ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್ ನೇತೃತ್ವದ ಸಮಿತಿಯ ಸದಸ್ಯರಾದ ವಿಧಾನಪರಿಷತ್‌ನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಕೆಪಿಸಿಸಿ ಕಾರ್ಯಾ ಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ ಹಾಗೂ ಕಿಮ್ಮನೆ ರತ್ನಾಕರ್ ಅವರು ಕಾಂಗ್ರೆಸ್ ಭವನದಲ್ಲಿ ಪಕ್ಷದ ಕಾರ್ಯಕರ್ತರಿಂದ ಮಾಹಿತಿಗಳನ್ನು ಸಂಗ್ರಹಿಸಿದರು.

ಸುಳ್ಳು ಸಂದೇಶಗಳು, ಕಪೋಲಕಲ್ಪಿತ ಮೆಸೇಜುಗಳ ಮೂಲಕ ಸಮಾಜದ ಸ್ವಾಸ್ಥ್ಯಕೆಡಿಸುವವರು, ಕೋಮು ಗಲಭೆ ಸೃಷ್ಟಿಸುವ ಮಾತು, ಕೃತಿಗಳು, ಅಕ್ರಮ ಚಟುವಟಿಕೆಗಳು, ಯಕ್ಷಗಾನದಲ್ಲಿ ಹಾಸ್ಯಗಾರ ರಾಗಿ ಬಂದು ಒಂದು ಪಕ್ಷದ ಪರವಾಗಿ ಅಭಿಪ್ರಾಯ ಸೃಷ್ಟಿಸುವವರು, ರಾಜಕೀಯ ಕಾರಣಗಳಿಗಾಗಿ ಅಮಾಯಕರ ಕೊಲೆ ಇತ್ಯಾದಿಗಳನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂದು ಸದಸ್ಯರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ವಿನಯಕುಮಾರ್ ಸೊರಕೆ, ಎಂ.ಎ.ಗಪೂರ್, ಗೋಪಾಲ ಪೂಜಾರಿ, ಉದಯ ಶೆಟ್ಟಿ ಮುನಿಯಾಲ್, ಪ್ರಸಾದ್‌ರಾಜ್ ಕಾಂಚನ್, ವೆರೋನಿಕ ಕರ್ನೆಲಿಯೋ, ಪ್ರಕಾಶ್‌ಚಂದ್ರ ಶೆಟ್ಟಿ, ನೀರೇ ಕೃಷ್ಣ ಶೆಟ್ಟಿ , ಭುಜಂಗ ಶೆಟ್ಟಿ, ಮಹಾಬಲ ಕುಂದರ್, ನಾಗೇಶ್ ಕುಮಾರ ಉದ್ಯಾವರ, ರಾಜು ಪೂಜಾರಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಇವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಸಮಿತಿ ಸದಸ್ಯರನ್ನು ಶಾಲು ಹೊದಿಸಿ ಗೌರ ವಿಸಿದರು. ಕಾಂಗ್ರೆಸ್ ಮುಖಂಡರಾದ ದಿನೇಶ್ ಪುತ್ರನ್, ಹರೀಶ್ ಕಿಣಿ, ನರಸಿಂಹ ಮೂರ್ತಿ, ಕೃಷ್ಣ ಮೂರ್ತಿ ಆಚಾರ್ಯ, ಕೆ.ಹರಿಪ್ರಸಾದ್ ಶೆಟ್ಟಿ, ರಮೇಶ್ ಕಾಂಚನ್, ಪ್ರದೀಪ್ ಕುಮಾರ್ ಶೆಟ್ಟಿ, ಶಂಕರ ಕುಂದರ್, ರಾಘವೇಂದ್ರ ಶೆಟ್ಟಿ, ವೈಸುಕುಮಾರ್, ಸಂತೋಷ್ ಕುಲಾಲ್, ಗೋಪಿನಾಥ್ ಭಟ್, ಶುಭದಾ ರಾವ್, ಶೇಖ್ ವಾಹಿದ್, ಇಸ್ಮಾಯಿಲ್ ಆತಾಡಿ, ಅಬ್ದುಲ್ ಅಜೀಜ್, ಸುನೀಲ್ ಡಿ. ಬಂಗೇರ, ಕೃಷ್ಣ ಶೆಟ್ಟಿ ಬಜೆಗೋಳಿ, ಜ್ಯೋತಿ ಹೆಬ್ಬಾರ್, ಕಿಶೋರ್ ಎರ್ಮಾಳು, ಸೌರಬ್ ಬಲ್ಲಾಳ್, ಕಿರಣ್ ಹೆಗ್ಡೆ, ಶಶಿಧರ ಶೆಟ್ಟಿ ಎಲ್ಲೂರು, ಶಬ್ಬಿರ್ ಅಹಮ್ಮದ್, ಶರ್ಪುದ್ದೀನ್ ಶೇಖ್, ಜಯಕುಮಾರ್, ಬಿಪಿನ್ ಚಂದ್ರಪಾಲ್, ದಿನಕರ ಹೇರೂರು, ದಿಲೀಪ್ ಹೆಗ್ಡೆ, ರೋಶನಿ ಒಲಿವೇರಾ, ಗೀತಾ ವಾಗ್ಲೆ, ಸಂದ್ಯಾ ತಿಲಕ್ ರಾಜ್ ಕೀರ್ತಿಶೆಟ್ಟಿ, ಪ್ರಖ್ಯಾತ ಶೆಟ್ಟಿ, ಹಬೀಬ್ ಆಲಿ, ಲಕ್ಷ್ಮೀಶ ಶೆಟ್ಟಿ, ಚಂದ್ರಿಕಾ ಶೆಟ್ಟಿ, ಸುರೇಶ್ ಶೆಟ್ಟಿ ಬನ್ನಂಜೆ, ಪ್ರಶಾಂತ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.

ಸಹಕಾರಿ ಕಾಂಗ್ರೆಸ್ ಅಧ್ಯಕ್ಷೆ ಕೆ.ಅಣ್ಣಯ್ಯ ಸೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News