×
Ad

ವೈದ್ಯರ ದಿನ; ಬೃಹತ್ ಜಲವರ್ಣ ಕಲಾಕೃತಿ ಅನಾವರಣ

Update: 2025-07-03 20:12 IST

ಮಣಿಪಾಲ, ಜು.3: ರಾಷ್ಟ್ರೀಯ ವೈದ್ಯರ ದಿನ-2025ರ ಅಂಗವಾಗಿ ಮಣಿಪಾಲ ಕೆಎಂಸಿಯ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗ ದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ಬೃಹತ್ ಜಲವರ್ಣ ಕಲಾಕೃತಿಯನ್ನು ಕೆಎಂಸಿಯ ಇಂಟಾರಾಕ್ಟ್ ಆವರಣದಲ್ಲಿ ರಚಿಸಿದರು.

ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಅಸೋಸಿಯಟ್ ಡೀನ್ ಡಾ. ರಂಜಿತಾ ಎಸ್. ಶೆಟ್ಟಿ ಈ ಜಲವರ್ಣ ಕಲಾಕೃತಿಯನ್ನು ಅನಾವರಣಗೊಳಿಸಿ ಈ ವರ್ಷದ ವೈದ್ಯರ ದಿನದ ಘೋಷವಾಕ್ಯವಾದ ‘ಮುಖ ಕವಚದ ಹಿಂದೆ ಆರೈಕೆ ಮಾಡುವವರ ಕಾಳಜಿ’ ಕುರಿತಂತೆ ವಿವರಿಸಿದರು.

ಕೆಎಂಸಿ ವೈದ್ಯರಾದ ಡಾ.ಮುರಳಿಧರ್ ಕುಲಕರ್ಣಿ, ಡಾ ಚೈತ್ರಾ ರಾವ್, ಡಾ.ಸಂಜಯ ಕಿಣಿ, ಡಾ. ಸ್ನೇಹಾ ಡಿ ಮಲ್ಯ, ಡಾ. ಈಶ್ವರಿ, ಡಾ. ಹರ್ಷಿತ, ಡಾ.ರಿಷಿ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಕಲಾಕೃತಿ 10 ದಿನಗಳ ಕಾಲ ಕೆಎಂಸಿಯ ಇಂಟರ್ಯಾಕ್ಟ್ ಆವರಣದಲ್ಲಿ ಪ್ರದರ್ಶನಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News