ಕ್ರೀಡಾಕೂಟಗಳ ಮೂಲಕ ಆರೋಗ್ಯ ವೃದ್ಧಿ: ನಾಗರಾಜ ಕಾಮಧೇನು
Update: 2025-07-07 17:05 IST
ಕುಂದಾಪುರ, ಜು.7: ಕೆಸರು ಗದ್ದೆ ಕ್ರೀಡಾ ಕೂಟದ ಮೂಲಕ ನಮ್ಮ ದೇಹವನ್ನು ಮಣ್ಣಿನ ಜೊತೆಗೆ ಆಟ ಆಡುವ ಮೂಲಕ ನಮ್ಮ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಹಾಗೂ ಪರಸ್ಪರ ಸ್ನೇಹದ ವಾತಾವರಣ ಮೂಡುತ್ತದೆ ಎಂದು ಒಂಭತ್ತುದಂಡಿಗೆ ಶ್ರೀಚಿಕ್ಕಮ್ಮ ದೇವಿ ದೇವಸ್ಥಾನದ ಅಧ್ಯಕ್ಷ ನಾಗರಾಜ ಕಾಮಧೇನು ಹೇಳಿದ್ದಾರೆ.
ಕುಂದಾಪುರದ ಪಡುಕೇರಿಯ ಯುವ ಮಿತ್ರವೃಂದ ವತಿಯಿಂದ ನಡೆದ ಕೆಸ್ರ ಗೆದ್ದಿಯಟಗ್ ಒಂದ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಬೀರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಸದಸ್ಯ ರಮೇಶ್, ಕುಂದಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಮಹಿಳಾ ಘಟಕದ ಅಧ್ಯಕ್ಷೆ ರಾಜೀವಿ, ಸಂಸ್ಥೆ ಕಾರ್ಯದರ್ಶಿ ಮಹೇಶ್ ನಾಯಕ್ ಉಪಸ್ಥಿತರಿದ್ದರು.
ರತ್ನಾಕರ ಸ್ವಾಗತಿಸಿದರು, ಗೌರವ ಅಧ್ಯಕ್ಷ ಅಮರ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಾಪಕ ಹರ್ಷ ಕಾರ್ಯಕ್ರಮ ನಿರೂಪಿಸಿದರು.