ಕೆಸರು ನೀರಿನಲ್ಲಿ ಬಿದ್ದು ವ್ಯಕ್ತಿ ಮೃತ್ಯು
Update: 2025-07-12 21:37 IST
ಮಲ್ಪೆ, ಜು.12: ತೋನ್ಸೆಯ ರಾಘು ಅಮೀನ ಎಂಬವರ ತೆಂಗಿನ ತೋಟದಲ್ಲಿ ತೆಂಗಿನ ಕಾಯಿ ಹೆಕ್ಕಲು ಜು.11ರಂದು ಬೆಳಗ್ಗೆ ಹೋದ ನಿತ್ಯಾನಂದ(49) ಎಂಬವರು ತೋಟದಲ್ಲಿ ನಿಂತಿರುವ ಕೆಸರು ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.