ಕೈಯಲ್ಲಿ ಮಣ್ಣು, ಹೃದಯದಲ್ಲಿ ಭಾರತ ಅಭಿಯಾನ: ಗಿಡ ನೆಟ್ಟು ಸಂಭ್ರಮಿಸಿದ ಚಿಣ್ಣರು
Update: 2025-07-13 21:24 IST
ಉಡುಪಿ, ಜು.13: ಕೈಯಲ್ಲಿ ಮಣ್ಣು, ಹೃದಯದಲ್ಲಿ ಭಾರತ ಎಂಬ ರಾಷ್ಟ್ರವ್ಯಾಪಿ ಅಭಿಯಾನದ ಪ್ರಯುಕ್ತ ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಸೇಶನ್‌ನ ಉಡುಪಿ ಘಟಕವು ಪರಿಸರ ಜಾಗೃತಿಯನ್ನು ಮೂಡಿಸಲು ಹಾಗೂ ಯುವ ಮನಸ್ಸುಗಳಲ್ಲಿ ಪ್ರಕೃತಿಯ ಕುರಿತು ಜವಾಬ್ದಾರಿಯನ್ನು ಹೆಚ್ಚಿಸಲು ಗಿಡ ನೆಡುವ ಕಾರ್ಯಕ್ರಮವನ್ನು ರವಿವಾರ ಆಯೋಜಿಸಿತು.
ಕಾರ್ಯಾಗಾರದಲ್ಲಿ ಮೆಹರುನಿಸಾ, ದೈನಂದಿನ ಜೀವನದಲ್ಲಿ ಸಸ್ಯಗಳ ಪ್ರಾಮುಖ್ಯತೆ ಮತ್ತು ಅವುಗಳ ವಿವಿಧ ಉಪಯೋಗಗಳ ಬಗ್ಗೆ ಮಕ್ಕಳಿಗೆ ತಿಳಿಯಪಡಿಸಿದರು. ನಂತರ ಸಿಐಓ ಮಕ್ಕಳು, ಐಸಿಸಿ ಹುಡುಗರು ಮತ್ತು ಎಸ್‌ಐಓ ಕಾರ್ಯಕರ್ತರು ಉಡುಪಿಯ ಜಾಮಿಯಾ ಮಸೀದಿಯ ಆವರಣದಲ್ಲಿ ಸಸಿಗಳನ್ನು ನೆಟ್ಟರು. ಜಾಮಿಯಾ ಮಸೀದಿಯ ರಿಯಾಜ್ ಅಹ್ಮದ್ ಉಪಸ್ಥಿತರಿದ್ದರು.