×
Ad

ಜಾನುವಾರು ಕಳವಿಗೆ ಯತ್ನ ಆರೋಪ: ಇಬ್ಬರ ಬಂಧನ

Update: 2025-07-15 22:17 IST

ಗಂಗೊಳ್ಳಿ: ನಾಡಾ ಗ್ರಾಮ ಪಂಚಾಯತ್ ಸಮೀಪ ಜು.6ರಂದು ರಸ್ತೆ ಬದಿ ಮಲಗಿದ್ದ ದನಗಳನ್ನು ಕಳವು ಮಾಡಲು ಯತ್ನಿಸಿದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಗಂಗೊಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬ್ರಹ್ಮಾವರದ ಬೈಕಾಡಿಯ ಹೊನ್ನಾಳದ ನೌಫಲ್(23) ಹಾಗೂ ಕುಂದಾಪುರ ಗುಲ್ವಾಡಿ ಮಾವಿನಕಟ್ಟೆಯ ನಿಶಾದ್(23) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ 5ಲಕ್ಷ ರೂ. ಮೌಲ್ಯದ ಕಾರು ಹಾಗೂ 9ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ರಸ್ತೆ ಬದಿ ಮಲಗಿರುವ ದನಗಳನ್ನು ಕಾರಿಗೆ ತುಂಬಲು ಪ್ರಯತ್ನಿಸಿದ್ದು, ಈ ವೇಳೆ ದಾರಿಯ ಲ್ಲಿನ ವಾಹನವನ್ನು ನೋಡಿ ಓಡಿ ಹೋಗಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ಪ್ರಕರಣ ಪತ್ತೆಗಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ವಿಶೇಷ ತಂಡ ರಚಿಸಿ ಜು.14ರಂದು ಆರೋಪಿಗಳನ್ನು ಬಂಧಿಸಿ, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News