ಕೋಟತಟ್ಟು: ರಸ್ತೆ, ಚರಂಡಿ ಕಾಮಗಾರಿ ಸಂಸದರಿಂದ ಪರಿಶೀಲನೆ
Update: 2025-07-16 21:53 IST
ಕೋಟ, ಜು.19: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕೆರೆ 5ನೇ ವಾರ್ಡಿನ ರಸ್ತೆ ಕಾಂಕ್ರೀಟೀಕರಣ ಮತ್ತು ಚರಂಡಿ ರಚನೆ ಕಾಮಗಾರಿಗಾಗಿ ಈ ಹಿಂದೆ ತಾನು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಸಮಾಜ ಕಲ್ಯಾಣ ಇಲಾಖೆಯಿಂದ 60ಲಕ್ಷ ರೂ. ಅನುದಾನವನ್ನು ಒದಗಿಸಿದ್ದ ಪ್ರಸ್ತುತ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯರಾದ ಪ್ರಮೋದ್ ಹಂದೆ, ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ವಿದ್ಯಾ ಸಾಲಿಯಾನ್, ಜ್ಯೋತಿ, ಸೀತಾ, ಅಶ್ವಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಮಾಜಿ ಅಧ್ಯಕ್ಷರಾದ ವಿಶ್ವಪ್ರಕಾಶಿನಿ ಹಂದೆ, ರಘು ತಿಂಗಳಾಯ, ಮಾಜಿ ಸದಸ್ಯರಾದ ರಾಮ ಬಂಗೇರ, ರಮಾನಂದ ಮೆಂಡನ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಗಣೇಶ್ ಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.