×
Ad

ಜನಪದ ವೈದ್ಯಸಿರಿ ಪ್ರಶಸ್ತಿ ಆಯ್ಕೆಗೆ ಅರ್ಜಿ ಆಹ್ವಾನ

Update: 2025-07-25 19:36 IST

ಉಡುಪಿ, ಜು.25: ಕರ್ನಾಟಕದ ಮೂಲೆಮೂಲೆಗಳಲ್ಲಿ ಪರಂಪರಾಗತ ವೈದ್ಯ ಪದ್ಧತಿಯನ್ನು ಮುಂದುವರಿಸಿಕೊಂಡು ಜನಸೇವೆಯಲ್ಲಿ ತತ್ಪರರಾಗಿರುವ ಜನಪದ ವೈದ್ಯರ ಜ್ಞಾನ ಭಂಡಾರದ ಉಳಿವಿಗಾಗಿ ಹಾಗೂ ಅವರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉಡುಪಿ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಮೂಲಕ ನೀಡುವ ರಾಜ್ಯ ಮಟ್ಟದ ಜನಪದ ವೈದ್ಯಸಿರಿ ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕನಿಷ್ಠ 15 ವರ್ಷಗಳ ಸೇವಾನುಭವವುಳ್ಳ ಕರ್ನಾಟಕದ ನುರಿತ ನಾಟಿ ವೈದ್ಯರು ಅಥವಾ ಅವರ ಪ್ರತ್ಯಕ್ಷ ಮಾಹಿತಿಯುಳ್ಳವರು ಈ ಕೆಳಗಿನ ವಿವರಗಳನ್ನು ಆಯಾ ಗ್ರಾಮಪಂಚಾಯತ್ ಅಧ್ಯಕ್ಷರ ಶಿಫಾರಸು ಪತ್ರ ದೊಂದಿಗೆ ಕಳುಹಿಸಲು ವಿನಂತಿಸಲಾಗಿದೆ.

ಜನಪದ ವೈದ್ಯರ ಸಂಪೂರ್ಣ ಹೆಸರು, ಇತ್ತೀಚಿಗಿನ ಭಾವಚಿತ್ರ, ವಯಸ್ಸು, ವಿದ್ಯಾಭ್ಯಾಸ, ವೃತ್ತಿ, ಲಿಂಗ, ಖಾಯಂ ವಿಳಾಸ, ದೂರವಾಣಿ ಸಂಖ್ಯೆ, ಯಾವ ಕಾಯಿಲೆಯ ಚಿಕಿತ್ಸೆಗೆ ಪರಿಣತರು, ಗುರುವಿನ ಹೆಸರು, ಎಷ್ಟು ವರ್ಷದ ಅನುಭವ, ಬಳಸುವ ಔಷಧ ಮೂಲಗಳು (ಸಸ್ಯ/ಖನಿಜ), ಸ್ವಂತ ಔಷಧಿ ತಯಾರಿಸುತ್ತಾ ರೆಯೇ, ಹಳೆಯ ಗ್ರಂಥಗಳಿವೆಯೇ, ಅನುಭವದ ದಾಖಲಾತಿ ಇದೆಯೋ, ಇತರೆ ಪ್ರಮಾಣಪತ್ರ, ಇತರೆ ಸನ್ಮಾನ ಪತ್ರಇದೆಯೋ ಎಂಬುದರ ಬಗ್ಗೆ ಮಾಹಿತಿಯನ್ನು ಈ ಕೆಳಗಿನ ವಿಳಾಸಕ್ಕೆ ಆಗಸ್ಟ್ 25ರ ಒಳಗೆ ಕಳುಹಿಸಬೇಕು.

ಅರ್ಜಿ ಕಳುಹಿಸುವ ವಿಳಾಸ: ಪ್ರಾಂಶುಪಾಲರು, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಅಂಚೆ: ಕುತ್ಪಾಡಿ, ಉಡುಪಿ ಜಿಲ್ಲೆ - 574118.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News