ಅಂದರ್ ಬಾಹರ್: ಐವರ ಬಂಧನ
Update: 2025-07-28 20:50 IST
ಕಾಪು, ಜು.28: ಮೇಲ್ ಪಾಂಗಾಳ ಎಂಬಲ್ಲಿ ಜು.27ರಂದು ರಾತ್ರಿ ವೇಳೆ ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಚ್ಚಿಲದ ಸುಲೇಮಾನ್(57), ಮಿಥುನ್(41), ಆತ್ರಾಡಿಯ ಚಂದ್ರಶೇಖರ್(55), ಮಲ್ಲಾರು ಗ್ರಾಮದ ಅಮಾನುಲ್ಲಾ(50), ಉಳಿಯಾರಗೊಳಿ ಗ್ರಾಮದ ಸುರೇಶ್(55) ಎಂದು ಗುರುತಿಸಲಾಗಿದೆ. ಇವರಿಂದ 7,500ರೂ. ನಗದು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.