×
Ad

ಜಮೀಯ್ಯತುಲ್ ಫಲಾಹ್ ಬ್ರಹ್ಮಾವರ ಅಧ್ಯಕ್ಷರಾಗಿ ಇಬ್ರಾಹಿಂ ಮಟಪಾಡಿ

Update: 2025-08-04 19:53 IST

ಇಬ್ರಾಹಿಂ ಮಟಪಾಡಿ

ಬ್ರಹ್ಮಾವರ: ಜಮೀಯ್ಯತುಲ್ ಫಲಾಹ್ ಉಡುಪಿ ಮತ್ತು ದ.ಕ. ಜಿಲ್ಲೆ ಇದರ ಬ್ರಹ್ಮಾವರ ತಾಲೂಕು ಘಟಕದ ಮಹಾಸಭೆ ಆ.2ರಂದು ಬ್ರಹ್ಮಾವರ ಉಪ್ಪಿನಕೋಟೆಯ ಜಾಮೀಯ ಮಸೀದಿಯಲ್ಲಿ ನಡೆಯಿತು.

ಸಭೆಯಲ್ಲಿ ಕೇಂದ್ರ ಸಮಿತಿಯಿಂದ ವೀಕ್ಷಕರಾಗಿ ಸಮೀರ್ ಉಡುಪಿ ಹಾಗೂ ಅಬು ಮೊಹಮ್ಮದ್ ಕುಂದಾಪುರ ಉಪಸ್ಥಿತರಿದ್ದರು. ಮುಂದಿನ ಎರಡು ವರ್ಷಗಳ ಅವಧಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು

ಅಧ್ಯಕ್ಷರಾಗಿ ಇಬ್ರಾಹಿಂ ಮಟಪಾಡಿ, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಸಲಾಂ ಹಾಗೂ ಹಾರೂನ್ ರಶೀದ್ ಸಾಸ್ತಾನ, ಪ್ರಧಾನ ಕಾರ್ಯದರ್ಶಿಯಾಗಿ ಮೊಹಮ್ಮದ್ ಅಸೀಫ್ ಬೈಕಾಡಿ, ಜೊತೆ ಕಾರ್ಯದರ್ಶಿಯಾಗಿ ಶೇಕ್ ಸೇಹೇರಾಜ್, ಖಜಾಂಚಿಯಾಗಿ ಇಬ್ರಾಹಿಂ ಸಾಹೇಬ್ ಕೋಟ, ಸಂಘಟನ ಕಾರ್ಯದರ್ಶಿಯಾಗಿ ಅಸ್ಲಾಂ ಹೈಕಾಡಿ, ಪತ್ರಿಕಾ ಕಾರ್ಯದರ್ಶಿಯಾಗಿ ತಾಜುದ್ದೀನ್ ಇಬ್ರಾಹಿಂ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News