×
Ad

ಭರತನಾಟ್ಯ ವಿಶ್ವದಾಖಲೆಗೆ ತಾಯಿಯ ಪ್ರೇರಣೆ: ರೆಮೋನಾ ಎವೆಟ್ ಪಿರೇರಾ

Update: 2025-08-04 19:55 IST

ಮಂಗಳೂರು: ಭರತನಾಟ್ಯದಲ್ಲಿ ವಿಶ್ವದಾಖಲೆ ಮಾಡುವ ನನ್ನ ಸಾಧನೆಯ ಹಿಂದೆ ತಾಯಿಯು ಪ್ರೇರಣಾ ಶಕ್ತಿಯಾಗಿ ಪ್ರೋತ್ಸಾಹ ನೀಡಿದರು ಎಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾಡ್ಸ್ ಸಾಧಕಿ ರೆಮೋನಾ ಎವೆಟ್ ಪಿರೇರಾ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯು ನಗರದ ತುಳುಭವನದಲ್ಲಿ ರವಿವಾರ ಜಂಟಿಯಾಗಿ ಆಯೋಜಿಸಿದ ಮರಿಯಲದ ತುಳುನಾಡ್ ವಿಷಯದ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಲಲಿತಕಲಾ ಅಕಾಡಮಿಯ ವರ್ಣಶ್ರೀ ರಾಜ್ಯ ಪ್ರಶಸ್ತಿ ವಿಜೇತೆ ವೀಣಾ ಶ್ರೀನಿವಾಸ ಹಾಗೂ ಮಿಸ್ ಬ್ಯೂಟಿಫುಲ್ ಐಸ್ ಪ್ರಶಸ್ತಿ ಪಡೆದ ಮೈತ್ರಿ ಮಲ್ಲಿ ಅವರು ರೆಮೋನಾ ಎವೆಟ್ ಪಿರೇರಾ ಅವರನ್ನು ಸನ್ಮಾನಿಸಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ಡಾ.ಶಿವರಾಮ ಕಾರಂತ ಟ್ರಸ್ಟ್‌ನ ಸದಸ್ಯೆ ಅತ್ರಾಡಿ ಅಮೃತ ಶೆಟ್ಟಿ, ಜಿಲ್ಲಾ ವಾರ್ತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಷಾ, ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಅಧ್ಯಕ್ಷ ಪ್ರದೀಪ್ ಕಾಪಿಕಾಡ್, ಮಹಿಳಾ ವೇದಿಕೆಯ ಪದಾಧಿಕಾರಿ ಶೋಭಾ, ಸುಪ್ರೀತಾ, ಅತಿಥಿಗಳಾದ ಶಕುಂತಲಾ ಎಸ್, ವಸಂತಿ ಜಯಪ್ರಕಾಶ್, ಪವಿತ್ರಾ ಕೆ, ಚೇತನಾ ರೋಹಿತ್ ಉಳ್ಳಾಲ್, ಮಲ್ಲಿಕಾ ರಘುರಾಜ್, ಕವಿತಾ ಶೈಲೇಶ್, ಪ್ರತಾಪ್, ಕಿರಣ್, ರಘುರಾಜ್ ಕದ್ರಿ, ರೆಮೋನಾ ಎವೆಟ್ ಪಿರೇರಾ ಅವರ ತಾಯಿ ಗ್ಲಾಡಿಸ್ ಪಿರೇರಾ, ಹರೀಶ್ ಕೊಡಿಯಾಲ್‌ಬೈಲ್, ವಿಜಯ ಮಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News