ಟಾಸ್ಕ್ ಜಾಬ್ ಹೆಸರಿನಲ್ಲಿ ವಂಚನೆ: ಪ್ರಕರಣ ದಾಖಲು
Update: 2025-08-04 21:11 IST
ಉಡುಪಿ: ಟಾಸ್ಕ್ ಜಾಬ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಅರುಣ್ ಎಂಬವರಿಗೆ ಅಪರಿಚಿತ ವ್ಯಕ್ತಿಯು ಮೊಬೈಲ್ ಸಂದೇಶ ಕಳುಹಿಸಿ ಉಚಿತವಾಗಿ ಯಾವುದೇ ಹಣವನ್ನು ಕಟ್ಟದೇ ಹೋಟೆಲ್‌ಗಳನ್ನು ರೇಟಿಂಗ್ ಮಾಡುವ ಟಾಸ್ಕ್ ಜಾಬ್‌ನ್ನು ನೀಡುವುದಾಗಿ ತಿಳಿಸಿದ್ದನು. ಆರೋಪಿಯು ಟಾಸ್ಕ್ ಜಾಬ್ ಎಂದು ಸುಳ್ಳು ಹೇಳಿ ಒಟ್ಟಾರೆಯಾಗಿ 82,932ರೂ. ಹಣವನ್ನು ತನಗೆ ಬೇಕಾದ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡು ಆನ್‌ಲೈನ್‌ನಲ್ಲಿ ವಂಚನೆ ಮಾಡಿರುವುದಾಗಿ ದೂರಲಾಗಿದೆ.