ನಿಟ್ಟೂರು ಶಾಲಾ ವಾರ್ಷಿಕೋತ್ಸವ: 125ನೇ ವರ್ಷಾಚರಣೆ ಲಾಂಛನ ಬಿಡುಗಡೆ
ಉಡುಪಿ, ಜ.17: ನಿಟ್ಟೂರು ತಾಂಗದಗಡಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 124ನೇ ವರ್ಷದ ಶಾಲಾ ವಾರ್ಷಿಕೋತ್ಸವವು ಇತ್ತೀಚೆಗೆ ಅಮರ ಕಲಾಮಂದಿರದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್ 125ನೇ ವರ್ಷಾಚರಣೆಯ ಲಾಂಛನವನ್ನು ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಜಯಕರ ಶೆಟ್ಟಿ ಪಳ್ಳಿ ಕಾವೇರಿಬೆಟ್ಟು ವಹಿಸಿದ್ದರು.
ಪ್ರಸ್ತುತ ನಿವೃತ್ತಿ ಹೊಂದಿದ ಶಾಲಾ ದೈಹಿಕ ಶಿಕ್ಷಕ ರಾಮಪ್ಪ ಎಸ್.ದೊಡ್ಮನಿ ಹಾಗೂ ಕರಂಬಳ್ಳಿ ವಾರ್ಡಿನ ನಿಕಟಪೂರ್ವ ನಗರಸಭಾ ಸದಸ್ಯ ಕೆ.ಗಿರಿಧರ್ ಆರ್ಚಾರ್ಯ ಅವರನ್ನು ಸನ್ಮಾನಿಸಲಾಯಿತು. ಶ್ಯಾಮಲ ಕೆ. ಮತ್ತು ದಿನೇಶ ಆಚಾರ್ಯರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘದ ಹಳೆ ವಿದ್ಯಾರ್ಥಿಗಳಿಗಾಗಿ ನಡೆಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಳೆ ವಿದ್ಯಾರ್ಥಿಗಳಾದ ಐವನ್ ಪುರ್ಟಡೋ, ಡಾ.ಪ್ರತಿಮಾ ಜೆ.ಆಚಾರ್ಯ, ಹಾಜಿ ಎಂ.ಇಕ್ಬಾಲ್, ಆಡಳಿತ ಸಮಿತಿಯ ಡೇನಿಸ್ ಕರ್ನೇಲಿಯೊ, ಶಾಲಾ ವಿದ್ಯಾರ್ಥಿ ನಾಯಕಿ ರಾಯಿಷಾ ರಫೀದ, ಹಳೆ ವಿದ್ಯಾರ್ಥಿ ಸಂಘದ ಸುವರ್ಣ ನಿಧಿ ಅಧ್ಯಕ್ಷ ರಾಮಚಂದ್ರ ಆಚಾರ್ಯ, ಶಿಕ್ಷಕರಕ್ಷಕ ಸಂಘದ ಕವಿತಾ ಶೆಟ್ಟಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಬಾರಿತ್ತಾಯ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕರ್ನೇಲಿಯೊ ವರದಿ ವಾಚಿಸಿದರು. ಸಂಘದ ವರದಿಯನ್ನು ಕಾರ್ಯದರ್ಶಿ ಬಾಲಚಂದ್ರ ಗಾಟಸ್ಕರ್ ವಾಚಿಸಿದರು. ಸನ್ಮಾನ ಪತ್ರ ಮತ್ತು ಅಭಿನಂದನ ಪತ್ರವನ್ನು ಲಕ್ಷ್ಮೀನಾರಾಯಣ ಬಿ ಆಚಾರ್ಯ, ಕಮಲಾಕ್ಷ ಶೇಟ್, ಮಹಮ್ಮದ್ ಸಿದ್ಧಿಕ್, ಸಮಿತ ವಾಚಿಸಿದರು.
ಪಟ್ಟಿಯನ್ನು ಕ್ರೀಡಾ ಕಾರ್ಯದರ್ಶಿ ಕೃಷ್ಣಮೂರ್ತಿ ಆಚಾರ್ಯ ವಾಚಿಸಿದರು. ಸಚೇಂದ್ರ ಕಕ್ಕುಂಜೆ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾಯಕ್ ವಂದಿಸಿದರು. ಹರೀಶ್ ಕರಂಬಳ್ಳಿ ಸಹಕಾರ ನೀಡಿದರು. ಹಳೆ ವಿದ್ಯಾರ್ಥಿ ಗಳಿಂದ ವಿಕ್ರಂ ಮಂಚಿ ರಚಿಸಿ ನಾಗರಾಜ ವರ್ಕಾಡಿ ನಿರ್ದೇಶನದ ಎನ್ನಿನಿ ಬೇತೆ ಆಯಿನಿ ಬೇತೆ ಎಂಬ ನಾಟಕ ಪ್ರದರ್ಶಿಸಲಾಯಿತು.