ಪಾಂಬೂರು ರಂಗಪರಿಚಯ ಸಾಂಸ್ಕೃತಿಕ ಆವರಣಕ್ಕೆ ಅನಿವಾಸಿ ಉದ್ಯಮಿ ಮೈಕಲ್ ಡಿಸೋಜ ಭೇಟಿ
ಶಿರ್ವ, ನ.27: ಅನಿವಾಸಿ ಭಾರತೀಯ ಉದ್ಯಮಿ, ದಾನಿ ಹಾಗೂ ‘ಮೈಕಲ್ ಡಿಸೋಜ ವಿಷನ್ ಕೊಂಕಣಿ’ ಹಾಗೂ ಮೈಕಲ್ ಡಿಸೋಜ ಚಾರಿಟೀಸ್ನ ಸ್ಥಾಪಕ ಮತ್ತು ಪೋಷಕ ಮೈಕಲ್ ಡಿಸೋಜ ಗುರುವಾರ ಪರಿಚಯ ಪಾಂಬೂರು ಇದರ ರಂಗಪರಿಚಯ ಸಾಂಸ್ಕೃತಿಕ ಆವರಣದ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದರು.
ಅವರೊಂದಿಗೆ ಅವರ ಪತ್ನಿ ಫ್ಲಾವಿಯಾ ಡಿಸೋಜ, ಚಾರ್ಟರ್ಡ್ ಅಕೌಂಟೆಂಟ್ ಲೈನಲ್ ಆರಾನ್ಹಾ, ಓಸ್ವಾಲ್ಡ್ ರೊಡ್ರಿಗಸ್ ಮತ್ತು ಶುಭಾ ರೊಡ್ರಿಗಸ್ ಹಾಜರಿದ್ದರು.
ಅತಿಥಿಗಳು ನಿರ್ಮಾಣ ಸ್ಥಳ ಮತ್ತು ಬಯಲು ರಂಗಮಂದಿರವನ್ನು ವೀಕ್ಷಿಸಿ, ಉದ್ದೇಶಿತ ಒಳಾಂಗಣ ರಂಗಮಂದಿರದ ನೀಲನಕ್ಷೆಗಳನ್ನು ಪರಿಶೀಲಿಸಿದರು. ಯೋಜನೆಗೆ ತಮ್ಮ ಬೆಂಬಲದ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮೈಕಲ್ ಡಿಸೋಜ ಬಯಲು ರಂಗಮಂದಿರದ ಆವರಣದಲ್ಲಿ ಸಸಿ ನೆಟ್ಟರು.ಪರಿಚಯದ ವ್ಯವಸ್ಥಾಪಕ ಟ್ರಸ್ಟಿ ಡಾ.ವಿನ್ಸೆಂಟ್ ಆಳ್ವ, ಅಧ್ಯಕ್ಷ ಅನಿಲ್ ಡೇಸಾ, ಕಾರ್ಯದರ್ಶಿ ಪ್ರಕಾಶ್ ನೊರೊನ್ಹಾ, ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರು ರೆ.ಫಾ.ಡೇನಿಸ್ ಡೇಸಾ, ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಎವ್ಜಿನ್ ಡಿಸೋಜ, ಕಲಾವಿದ ಹಾಗೂ ಟ್ರಸ್ಟಿ ವಿಲ್ಸನ್ ಡಿಸೋಜ, ಕಯ್ಯಿರ್, ಟ್ರಸ್ಟಿಗಳಾದ ಇಗ್ನೇಷಿಯಸ್ ಡಿಸೋಜ, ಲೂಕಾಸ್ ಡಿಸೋಜ, ಫ್ರೆಡ್ರಿಕ್ ಸಲ್ಡಾನ್ಹಾ, ಅರುಲ್ ಡಿಸೋಜ, ಜಾರ್ಜ್ ಅನಿಲ್ ಡಿಸೋಜ, ನೀಲ್ ಕ್ವಾಡ್ರಸ್, ಅಸುಂತಾ ಡಿಸೋಜ, ಎಡ್ವಿನ್ ನೋಯೆಲ್ ಡಿಸಿಲ್ವ, ರಾಜದೀಪ್ ಗೋಮ್ಸ್, ಜೆನಿತ್ ಆಳ್ವ, ಆಲ್ವನ್ ಕ್ಯಾಸ್ಟೆಲಿನೊ ಮತ್ತಿತರರು ಉಪಸ್ಥಿತರಿದ್ದರು.