×
Ad

ಕಾನೂನು ಬಾಹಿರ ಜಾತಿಪ್ರಮಾಣ ಪತ್ರ ರದ್ದುಗೊಳಿಸಲು ಮನವಿ

Update: 2023-08-26 20:42 IST

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬೋವಿ ಮತ್ತು ಪರಿವಾರ ನಾಯಕ್ ಜಾತಿಗಳಿಗೆ ಕಾನೂನು ಬಾಹಿರವಾಗಿ ಪರಿಶಿಷ್ಟರ ಜಾತಿ ಪ್ರಮಾಣ ನೀಡಲಾಗುತಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಉಡುಪಿ ಜಿಲ್ಲಾ ಘಟಕ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ತಹಶೀಲ್ದಾರರುಗಳ ಮೇಲೆ ರಾಜಕೀಯ ಒತ್ತಡ ತಂದು ಜಿಲ್ಲೆಯಲ್ಲಿ ನೂರಾರು ಇಂತಹ ಅಕ್ರಮ ಜಾತಿ ದೃಢಪತ್ರಗಳನ್ನ ನೀಡಿದ್ದು, ಇವುಗಳ ಮಾಹಿತಿಯನ್ನು ಸಂಘಟನೆಯು ಕಲೆಹಾಕಿದೆ. ಇಂತಹ ಕಾನೂನು ಬಾಹಿರ ಜಾತಿ ಪ್ರಮಾಣ ಪತ್ರಗಳನ್ನು ರದ್ದು ಮಾಡಬೇಕು. ಇನ್ನು ಮುಂದೆ ಜಿಲ್ಲೆಯಲ್ಲಿ ಬೋವಿ ಮತ್ತು ಪರಿವಾರ ನಾಯಕ್ ಜಾತಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದು. ಇದೇ ರೀತಿ ಅಕ್ರಮ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಸಲಾಗಿದೆ.

ಜಿಲ್ಲಾ ಸಂಚಾಲಕ ಸುಂದರ ಮಾಸ್ತರ್,ಜಿಲ್ಲಾ ಸಂಘಟನಾ ಸಂಚಾಲಕ ಶಾಮ್‌ರಾಜ್ ಬಿರ್ತಿ, ಉಡುಪಿ ಜಿಲ್ಲಾ ಪರಿಶಿಷ್ಟ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪರಮೇಶ್ವರ ಉಪ್ಪೂರು, ದಸಂಸ ಹೋರಾಟಗಾರರಾದ ಮಂಜುನಾಥ ಗಿಳಿಯಾರು, ರಮೇಶ್ ಕೆಳಾರ್ಕಳಬೆಟ್ಟು, ವಾಸುದೇವ ಮುದೂರು, ವಿಶ್ವನಾಥ ಬೆಳ್ಳಂಪಳ್ಳಿ, ಸುರೇಶ್ ಹಕ್ಲಾಡಿ ಮತ್ತು ಧನಂಜಯ್ ಈ ಸಂದರ್ಭ ದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News