×
Ad

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ: ಅರ್ಜಿ ಆಹ್ವಾನ

Update: 2023-10-11 19:20 IST

ಉಡುಪಿ, ಅ.11: ತಾಲೂಕಿನ ಅಂಬಲಪಾಡಿ ಗ್ರಾಪಂ ಗ್ರಂಥಾಲಯ ದಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು-1 ಹುದ್ದೆ (ಪ್ರವರ್ಗ- 2(ಎ)-ಗ್ರಾಮೀಣ ಅಭ್ಯರ್ಥಿ) ಹಾಗೂ ಕುಂದಾಪುರ ತಾಲೂಕಿನ ಗುಲ್ವಾಡಿ (ಸಾಮಾನ್ಯ ಅಭ್ಯರ್ಥಿ-ಮಹಿಳೆ) ಮತ್ತು ಯಡಮೊಗೆ ಗ್ರಾಪಂನ (ಪ್ರವರ್ಗ- 2(ಬಿ)-ಗ್ರಾಮೀಣ ಅಭ್ಯರ್ಥಿ) ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರು-ತಲಾ 1 ಹುದ್ದೆ ಸೇರಿದಂತೆ ಒಟ್ಟು 3 ಹುದ್ದೆ ಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಅ.25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಗ್ರಾಪಂ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News