×
Ad

ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ: ಅರ್ಜಿ ಆಹ್ವಾನ

Update: 2024-09-03 21:08 IST

ಉಡುಪಿ, ಸೆ.3: ಮೀನುಗಾರಿಕಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜ ನೆಯ-ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘಟಕವಾರು/ವರ್ಗವಾರು ಗುರಿಗಳನ್ನು ನಿಗದಿ ಪಡಿಸಿದ್ದು, ಯೋಜನೆಯನ್ನು ಪಾರದರ್ಶಕ ವಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.

ಜಿಲ್ಲೆಗೆ ನಿಗದಿಪಡಿಸಲಾಗಿರುವ ಘಟಕವಾರು/ವರ್ಗವಾರು ಗುರಿಗಳ ವಿವರ ಹೀಗಿದೆ: ಹೊಸ ಮೀನು ಕೃಷಿ ಕೊಳಗಳ ನಿರ್ಮಾಣ, ಕಡಲಚಿಪ್ಪು ಕೃಷಿ-ಮಸ್ಸೆಲ್ಸ್, ಕಲ್ಲ, ಕ್ಲಾಮ್ಸ್ ಇತ್ಯಾದಿ, ಬ್ಯಾಕ್ ಯಾರ್ಡ್ ಮಿನಿ ಆರ್.ಎ.ಎಸ್ ಘಟಕ ಸ್ಥಾಪನೆ, 30 ಟನ್ ಸಾಮರ್ಥ್ಯದ ಐಸ್ ಪ್ಲ್ಯಾಂಟ್/ಕೋಲ್ಡ್ ಸ್ಟೋರೇಜ್ ನಿರ್ಮಾಣ, ಐಸ್ ಪ್ಲ್ಯಾಂಟ್/ಕೋಲ್ಡ್ ಸ್ಟೋರೇಜ್ ಗಳ ನವೀಕರಣ, ಮೋಟಾರ್ ಸೈಕಲ್‌ನೊಂದಿಗೆ ಐಸ್‌ಬಾಕ್ಸ್, ಕಮ್ಯುನಿಕೇಶನ್ ಮತ್ತು ಟ್ರ್ಯಾಕಿಂಗ್ ಡಿವೈಸ್‌ಗಳನ್ನು ಹೊರತು ಪಡಿಸಿ ಸಾಂಪ್ರದಾಯಿಕ ಮತ್ತು ಮೋಟಾರೀಕೃತ ಮೀನುಗಾರಿಕಾ ದೋಣಿಗಳ ಮೀನುಗಾರರಿಗೆ ಸುರಕ್ಷತಾ ಕಿಟ್‌ಗಳನ್ನು ಒದಗಿಸಲು ಬೆಂಬಲ, ಸಾಂಪ್ರದಾಯಿಕ ಮತ್ತು ಮೋಟಾರೀಕೃತ ಮೀನುಗಾರಿಕಾ ದೋಣಿಗಳ ಮೀನುಗಾರರಿಗೆ ಕಮ್ಯೂನಿ ಕೇಶನ್ ಮತ್ತು ಟ್ರ್ಯಾಕಿಂಗ್ ಉಪಕರಣಗಳು, ಸಾಂಪ್ರದಾಯಿಕ ಮೀನುಗಾರರಿಗೆ (ಬದಲಿ) ದೋಣಿ ಮತ್ತು ಬಲೆ ಒದಗಿಸುವುದು ಹಾಗೂ ಆಳ ಸಮುದ್ರ ಗಿಲ್‌ನೆಟ್ ಯಾಂತ್ರೀಕೃತ ಬೋಟ್ ನಿರ್ಮಾಣಕ್ಕೆ ಸಹಾಯ.

ಅರ್ಜಿ ಸಲ್ಲಿಸಲು ಸೆಪ್ಟಂಬರ್ 15 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸ ಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News