ಐರೋಡಿ ಗೋವಿಂದಪ್ಪರಿಗೆ ಪುಂಡಲೀಕ ಹಾಲಂಬಿ ಪ್ರಶಸ್ತಿ
Update: 2024-09-05 19:11 IST
ಉಡುಪಿ, ಸೆ.5: ಕಸಾಪದ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ನೆನಪಿನಲ್ಲಿ ನೀಡಲಾಗುವ ‘ಪುಂಡಲೀಕ ಹಾಲಂಬಿ ಯಕ್ಷ ಪುರಸ್ಕಾರ’ಕ್ಕೆ ಬಡಗುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದರಾದ ಐರೋಡಿ ಗೋವಿಂದಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಪುರಸ್ಕಾರವು 25,000ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ. ಇದೇ ಅ.15ರಂದು ಗುಂಡ್ಮಿಯ ಯಕ್ಷ ಕಲಾರಂಗದಲ್ಲಿ ಸಂಜೆ 4:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.