×
Ad

ವಿದ್ಯಾರ್ಥಿಗಳಿಂದ ಸರಕಾರಿ ಅಧಿಕಾರಿಗಳಿಗೆ ರಕ್ಷಾ ಬಂಧನ

Update: 2023-08-30 20:39 IST

ಉಡುಪಿ, ಆ.30: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ರಕ್ಷಾ ಬಂಧನ ಪ್ರಯುಕ್ತ ಉಡುಪಿ ನಗರದಾದ್ಯಂತ ರಾಷ್ಟ್ರ ರಕ್ಷೆಯ ಸಂಕಲ್ಪದೊಂದಿಗೆ ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮವನ್ನು ನಗರದ ವಿವಿಧ ಸರಕಾರಿ ಕಚೇರಿಗಳಲ್ಲಿ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ, ಮಣಿಪಾಲ ಪೊಲೀಸ್ ಠಾಣೆ, ಅಂಚೆ ಕಚೇರಿ, ಉಡುಪಿ ನಗರ ಪೊಲೀಸ್ ಠಾಣೆ, ಜಿಲ್ಲಾ ನ್ಯಾಯಾಲಯ, ಉಪನೊಂದವನಾ ಧಿಕಾರಿ ಕಚೇರಿ, ಮಿನಿ ವಿಧಾನಸೌಧ ಉಡುಪಿ (ತಾಲೂಕು ಕಚೇರಿ), ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಶಾಸಕರು ಸೇರಿದಂತೆ ವಿವಿಧ ಸರಕಾರಿ ಅಧಿಕಾರಿಗಳಿಗೆ ರಾಷ್ಟ್ರ ಮೊದಲು ಎನ್ನುವ ಸಂಕಲ್ಪದೊಂದಿಗೆ ರಕ್ಷೆಯನ್ನು ಕಟ್ಟಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲೂಕು ಸಂಚಾಲಕ ಅಜಿತ್ ಜೋಗಿ, ನಗರ ಕಾರ್ಯದರ್ಶಿ ಶ್ರೀವತ್ಸ ಮತ್ತು ಸಹ ಕಾರ್ಯದರ್ಶಿ ಕಾರ್ತಿಕ್, ಭಾವನ ಮತ್ತು ಪ್ರಮುಖರಾದ ಕೃತಿ, ಭೂಷಣ್, ಸ್ವಸ್ತಿಕ್, ಮನು ಶೆಟ್ಟಿ, ಶಿಶಿರ್ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News