ರಂಜನಿ ಸ್ಮಾರಕ ಸಂಗೀತ ಕಾರ್ಯಕ್ರಮ
ಉಡುಪಿ, ಆ.10: ರಂಜನಿ ಮೆಮೋರಿಯಲ್ ಟ್ರಸ್ಟ್‌ನ ಆಶ್ರಯದಲ್ಲಿ ಆಗಸ್ಟ್ ವಾರಾಂತ್ಯದಲ್ಲಿ ನಾಲ್ಕು ಉಪನ್ಯಾಸ ಹಾಗೂ ನಾಲ್ವರು ಸ್ಥಳೀಯ ಕಲಾವಿದರ ಹಾಡುಗಾರಿಕೆ ಕಚೇರಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಇಂದ್ರಾಳಿಯ ಹಯಗ್ರೀವ ನಗರದಲ್ಲಿರುವ ಲತಾಂಗಿಯಲ್ಲಿ ನಡೆಯಲಿದೆ.
ಪ್ರತಿಭಾನ್ವಿತ ಸಂಗೀತ ಕಲಾವಿದೆಯಾಗಿದ್ದ ರಂಜನಿ ಹೆಬ್ಟಾರ್ ನಿಧನರಾಗಿ 10 ವರ್ಷ ಕಳೆದಿದ್ದು ಆ ಪ್ರಯುಕ್ತ ಸವಿನೆನಪಿ ಗಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆ.12ರ ಸಂಜೆ 5:30ರಿಂದ ಬಾಲಪ್ರತಿಭೆ ಪುತ್ತೂರಿನ ಅನುಶ್ರೀ ಮಳಿ ಮತ್ತು ತನ್ಮಯಿ ಉಪ್ಪಂಗಳ ಅವರಿಂದ ಹಾಡುಗಾರಿಕೆ, ಆ. 13ರಂದು ಬೆಳಗ್ಗೆ 10ರಿಂದ ಚಿಂತಕ ಲಕ್ಷ್ಮೀಶ ತೊಳ್ಪಾಡಿ ಅವರ ‘ಅರಿವಿ ನೊಂದಿಗೆ ಇರವು’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸ್ವಾತಂತ್ರೋತ್ಸವದ ವಿಶೇಷ ಕಾರ್ಯಕ್ರಮವಾಗಿ ಆ.15ರ ಸಂಜೆ 5:30ಕ್ಕೆ ಮದರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ವಿ. ಶ್ರೀರಾಮ್ ಅವರು ಪುರಂದರದಾಸರ ಬಗ್ಗೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಆ.19ರಂದು ಸಂಜೆ 5:30ರಿಂದ ಕಾರ್ಕಳದ ಆತ್ರೇಯಿ ಕೃಷ್ಣಾ ಅವರಿಂದ ಹಾಡುಗಾರಿಕೆ, ಆ.20ರಂದು ಬೆಳಗ್ಗೆ 11ಕ್ಕೆ ಬೆಂಗಳೂರಿನ ರಾಗಶ್ರೀ ಕಾಲೇಜ್ ಆಫ್ ಮ್ಯೂಸಿಕ್‌ನ ಸಂಸ್ಥಾಪಕಿ ವಿ.ವಸಂತ ಮಾಧವಿ ಇವರು ಕರ್ನಾಟಕ ಸಂಗೀತದಲ್ಲಿ ಗಮಕಗಳ ಪ್ರಾಶಸ್ತ್ಯದ ಕುರಿತು ಮಾತನಾಡಲಿದ್ದಾರೆ.ಆ. 26ರಂದು ಸಂಜೆ 5:30ರಿಂದ ಸುರತ್ಕಲ್‌ನ ಶ್ರೇಯಾ ಕೊಳ ತ್ತಾಯ ಅವರಿಂದ ಹಾಡುಗಾರಿಕೆ, ಆ.27ರಂದು ಬೆಳಗ್ಗೆ 10ರಿಂದ ವಿಮರ್ಶಕ ವೀ. ಅರವಿಂದ ಹೆಬ್ಟಾರ್ ಅವರು ಕರ್ನಾಟಕ ಸಂಗೀತದ ಕೃತಿಗಳಿಗೆ ಸುಂದರತೆ’ ಕುರಿತು ಮಾತನಾಡಲಿದ್ದಾರೆ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.