ಹೂಡೆ ಸಾಲಿಹಾತ್‌ನಿಂದ ರಸ್ತೆ ಸುರಕ್ಷತಾ ಸಪ್ತಾಹ
Update: 2026-01-16 19:33 IST
ಉಡುಪಿ: ತೋನ್ಸೆ - ಹೂಡೆಯ ಸಾಲಿಹಾತ್ ಶಿಕ್ಷಣ ಸಂಸ್ಥೆ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ವಿದ್ಯಾರ್ಥಿ ಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಗಾರ ಇತ್ತೀಚಿಗೆ ಏರ್ಪಡಿಸಲಾಗಿತ್ತು.
ಮಲ್ಪೆ ಪೊಲೀಸ್ ಠಾಣಾಧಿಕಾರಿ ಈರಣ್ಣ ರಸ್ತೆ ಸಂಚಾರದ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಸಾಲಿಹಾತ್ ಪ್ರೌಢ ಶಾಲಾ ವಿದಾರ್ಥಿಗಳು ಹಾಗೂ ಸಾಲಿಹಾತ್ ಮಹಿಳಾ ಪ್ರಥವ ದರ್ಜೆ ಕಾಲೇಜು ವಿದ್ಯಾರ್ಥಿಗಳು ಈ ಕಾರ್ಯ ಗಾರದಲ್ಲಿ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ವೇದಿಕೆಯಲ್ಲಿ ಕಾಲೇಜು ಪ್ರಾಂಶುಪಾಲೆ ಡಾ.ಸಬೀನಾ, ಶಾಲಾ ಅಕಾಡೆಮಿ ಮುಖ್ಯಸ್ಥ ಅಬ್ದುಲ್ ಹಸೀಬ್ ತರಫ್ದೃರ್ ಮುಂತಾದವರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುನಂದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.