ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ವನಮಹೋತ್ಸವ
Update: 2025-07-20 11:19 IST
ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಕಾರ್ಕಳ ಬಂಗ್ಲೆಗುಡ್ಡೆ ಕಜೆ ಎಂಬಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪುರಸಭೆ ಸದಸ್ಯ ಹಾಗೂ ಉದ್ಯಮಿ ಅಶ್ಪಕ್ ಅಹಮದ್ ಗಿಡ ನೆಡುವ ಮೂಲಕ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಅಧ್ಯಕ್ಷ ರೋ. ಸುರೇಂದ್ರ ನಾಯಕ್, ಪೂರ್ವ ರೋಟರಿ ಜಿಲ್ಲಾ ಗವರ್ನರ್ ರೋ.ಡಾ. ಭರತೇಶ್ ಆದಿರಾಜ್, ಕಾರ್ಯದರ್ಶಿ ರೋ. ರಾಘವೇಂದ್ರ ಕಾಮತ್, ಪೂರ್ವಾಧ್ಯಕ್ಷರುಗಳಾದ ರೋ. ಪ್ರಶಾಂತ ಬಿಳಿರಾಯ, ರೋ. ಸುರೇಶ್ ನಾಯಕ್, ರೋ. ಉಪೇಂದ್ರ ವಾಗ್ಲೆ, ರೋಟರಿ ಸದಸ್ಯರುಗಳಾದ ರೋ. ಪ್ರಕಾಶ್ ವಾಗ್ಲೆ, ರೋ. ಅಬ್ದುಲ್ ರೆಹಮಾನ್, ರೋ. ಎಚ್ ಮಂಜುನಾಥ್ ಹೆಗ್ಡೆ, ರೋ. ಕೃಷ್ಣಪ್ಪ, ರೋ. ಸುಜಯ್ ಮತ್ತು ರೋ. ರಾಜೇಶ್ ಬೊಬ್ಬಳ ಭಾಗವಹಿಸಿದ್ದರು.
ರೋ ಸುಜಯ್ ಇವರು ಹಿಟಾಚಿ ಮೂಲಕ ಗುಂಡಿಗಳನ್ನು ಮಾಡಿ ಸಸಿಗಳನ್ನು ನೆಡಲು ಸಹಕರಿಸಿದರು. ಸುಮಾರು 50 ವಿವಿಧ ಜಾತಿಯ ಸಸಿಗಳನ್ನು ನೆಡಲಾಯ್ತು.