×
Ad

ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2023-09-17 21:24 IST

ಅಮಾಸೆಬೈಲು ಸೆ.17: ಮಚ್ಚಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕ ಎಂಬವರ ಮಗ ವಿವೇಕಾನಂದ (28) ಎಂಬವರು ಸೆ.16ರಂದು ಮನೆಯಿಂದ ನಾಪತ್ತೆಯಾಗಿದ್ದಾರೆ.

4 ಅಡಿ 8 ಇಂಚು ಎತ್ತರವಿದ್ದು ಎಣ್ಣೆ ಕಪ್ಪು ಮೈ ಬಣ್ಣ ಕೋಲು ಮುಖ ಸಪೂರ ಶರೀರ ಹೊಂದಿದ್ದಾರೆ. ಹಳದಿ ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಚಡ್ಡಿ ಧರಿಸಿದ್ದಾರೆ. ಕನ್ನಡ, ಭಾಷೆ ಮಾತನಾಡುತ್ತಾರೆ. ಎಡ ಕೈ ತೋರು ಬೆರಳಿನ ಬಳಿ ಹಳೆಯ ಗಾಯದ ಗುರುತು ಇತ್ತು. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 26/2023 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾರ್ಕಳ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಪೆರ್ವಾಜೆ ಪತ್ತೊಂಜಿಕಟ್ಟೆ ಗುಂಡ್ಯ ನಿವಾಸಿ ಶೋಭಾ ಎಂಬವರ ಮಗ ಪ್ರಸಾದ(25) ಎಂಬವರು ಸೆ.16ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಸುಮಾರು 5 ಅಡಿ 7 ಇಂಚು ಎತ್ತರ, ಗೋಧಿ ಮೈಬಣ್ಣ ಹೊಂದಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News