×
Ad

ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

Update: 2025-08-11 20:52 IST

ಕೋಟ, ಆ.11: ಕೋಡಿ ಕನ್ಯಾನ ಗ್ರಾಮದ ಸುರೇಶ ಎಂಬವರು ಆ.10ರಂದು ಬೆಳಗ್ಗೆ ಗಾರೆ ಕೆಲಸಕ್ಕೆ ಹೋಗುವು ದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲ್ಲೂರು: ಹೊಸೂರು ಗ್ರಾಮದ ಕನ್ನಮ್ಮ ಎಂಬವರ ಮಗ ರಾಮ(35) ಎಂಬವರು ಸೊಸೈಟಿಯಲ್ಲಿ ಸಾಲ ಮಾಡಿಕೊಂಡಿದ್ದು ಸಾಲ ಕಟ್ಟಲು ಕಷ್ಟ ಪಡುತ್ತಿದ್ದರು. ಫೆ.28ರಂದು ಕಾರ್ಕಳಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News