×
Ad

UDUPI | ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಕೋಟ್ಯಂತರ ರೂ. ವಂಚನೆ: ಕಾವಡಿ ಶಾಖೆ ವ್ಯವಸ್ಥಾಪಕ ಸಹಿತ ಇಬ್ಬರ ವಿರುದ್ಧ ಎಫ್ಐಆರ್

Update: 2025-11-15 15:35 IST

ಸುರೇಶ್ ಭಟ್  | ಹರೀಶ್ ಕುಲಾಲ್

ಉಡುಪಿ, ನ.15: ಸಾಯ್ಬರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸೇರಿ ಸಂಘಕ್ಕೆ ಕೋಟ್ಯಂತರ ರೂ. ವಂಚನೆ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಸಾಯ್ಬರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್ ಸುರೇಶ್ ಭಟ್ ಹಾಗೂ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ಎಂಬಾತನನ್ನು ನ.5ರಂದು ಸಂಘದ ಆಡಳಿತ ಮಂಡಳಿ ತೀರ್ಮಾನದಂತೆ ಬೇರೆ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಕಾವಡಿ ಶಾಖೆಗೆ ಮ್ಯಾನೇಜರ್ ಆಗಿ ವರ್ಗಾವಣೆಗೊಂಡು ಬಂದ ರಾಮ, ಹಿಂದಿನ ಮ್ಯಾನೇಜರ್ ಸುರೇಶ್ ಭಟ್ ಅವರಿಂದ ಅಧಿಕಾರ ವಹಿಸಿಕೊಳ್ಳುವ ವೇಳೆ ಕಾವಡಿ ಶಾಖೆಯಲ್ಲಿ ಸಂಗ್ರಹವಾದ ಸುಮಾರು 1.70 ಕೋಟಿ ರೂ. ವ್ಯತ್ಯಾಸ ಕಂಡುಬಂದಿತ್ತು. ಅದರಂತೆ ರಾಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಚೇರಿ ಸಿಬ್ಬಂದಿ ಜೊತೆ ತೆರಳಿ ಪರಿಶೀಲಿಸಿದ್ದು, ಈ ಸಂದರ್ಭ 1.70 ಕೋಟಿ ರೂ. ವಂಚಿಸಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೇ ಹರೀಶ್ ಕುಲಾಲ್ ಈ ಹಿಂದೆ ಕಾವಡಿ ಶಾಖೆಯಲ್ಲಿ ಆತನ ಚಿನ್ನಾಭರಣ ಅಡವಿಟ್ಟು 21 ಲಕ್ಷ ರೂ. ಪಡೆದಿದ್ದು, ಅದನ್ನು ಪರಿಶೀಲಿಸಿದಾಗ ಹರೀಶ್ ಕುಲಾಲ್, ಅಡವಿಟ್ಟ ಚಿನ್ನಾಭರಣ ಇಲ್ಲದೇ ಇರುವುದು ಬೆಳಕಿಗೆ ಬಂತು. ಇವರಿಬ್ಬರು ಸಂಘಟಿತವಾಗಿ ಸೇರಿಕೊಂಡು ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಮೋಸ ಮಾಡಿ ವಂಚಿಸುವ ಸಲುವಾಗಿ ದ್ರೋಹ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News