×
Ad

ಏಕಬಳಕೆ ಪ್ಲಾಸ್ಟಿಕ್ ನಿಷೇಧ: ಹೂವು ವ್ಯಾಪಾರಿಗಳಿಗೆ ಬ್ಯಾಗ್ ವಿತರಣೆ

Update: 2023-10-22 18:20 IST

ಉಡುಪಿ, ಅ.22: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಏಕಬಳಕೆ, ಪ್ಲಾಸ್ಟಿಕ್ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನೀಡಲಾದ ಸುಮಾರು 20,000 ಕಾಟನ್ ಬ್ಯಾಗ್‌ಗಳನ್ನು ನಗರಸಭೆ ವ್ಯಾಪ್ತಿಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ಹೂವಿನ ವ್ಯಾಪಾರಿಗಳಿಗೆ ರವಿವಾರ ವಿತರಿಸಲಾಯಿತು.

ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿ ಇರುವ ಹೂವಿನ ಮಾರ್ಕೇಟ್‌ವ ಮಾಲಕರುಗಳಿಗೆ ಸುಮಾರು 1,000 ಬಟ್ಟೆ ಚೀಲಗಳನ್ನು ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ವಿತರಿಸಿದರು. ಮುಂದೆ ಏಕರೂಪ ಪ್ಲಾಸ್ಟಿಕ್‌ನ್ನು ಗ್ರಾಹಕರಿಗೆ ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅವರು ಹೂವು ಅಂಗಡಿ ಮಾಲಕರಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ನಗರದಲ್ಲಿ ಏಕಬಳಕೆ, ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ನಿರಂತರವಾಗಿ ಕಾರ್ಯಾ ಚರಣೆ ನಡೆಸಿ ಹಲವು ಅಂಗಡಿಗಳಿಗೆ ದಂಡವನ್ನು ವಿಧಿಸಲಾಗುತ್ತಿದೆ. ಆದರೂ ಕಛೇರಿ ಸಮಯ ಹೊರತುಪಡಿಸಿ ಹಾಗೂ ರಾತ್ರಿ ವೇಳೆಯಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸುವುದು ಕಂಡು ಬಂದಿರುತ್ತದೆ ಎಂದು ಅವರು ತಿಳಿಸಿದರು.

ಉಡುಪಿ ನಗರದ ಸಾರ್ವಜನಿಕರು ಏಕರೂಪದ ಪ್ಲಾಸ್ಟಿಕ್ ಬಳಕೆಯನ್ನು ಮುಕ್ತಗೊಳಿಸಬೇಕು. ಹೂವಿನ ಮಾರ್ಕೇಟ್‌ಗಳಲ್ಲಿ ನೀಡುವಂತಹ ಬಟ್ಟೆ ಚೀಲಗಳನ್ನು ಮತ್ತು ಪುನಃ ಅದೇ ಚೀಲವನ್ನು ಮಾರುಕಟ್ಟೆಗೆ ಬರುವಾಗ ತೆಗೆದು ಕೊಂಡು ಬಂದು ಹೂ, ಇತರೇ ವಸ್ತುಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕ ಮನೋಹರ ಹಾಗೂ ಇತರ ನಗರಸಭಾ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News