ಉಡುಪಿ: ಫೆ. 6ರಂದು ಕ್ರೀಡಾ ವಸತಿ ಶಾಲೆ/ ನಿಲಯಗಳಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ; ಅರ್ಹತೆಗಳೇನು?
ಸಾಂದರ್ಭಿಕ ಚಿತ್ರ (Meta AI)
ಉಡುಪಿ: ಕರ್ನಾಟಕ ಕ್ರೀಡಾ ಪ್ರಾಧಿಕಾರ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಇವರ ವತಿಯಿಂದ 2025-26 ನೇ ಸಾಲಿನ ರಾಜ್ಯದ ಎಲ್ಲಾ ಕ್ರೀಡಾ ವಸತಿ ಶಾಲೆ/ ವಸತಿ ನಿಲಯಗಳಿಗೆ ಅರ್ಹ ಪ್ರತಿಭಾವಂತ ಕ್ರೀಡಾಪಾಟುಗಳ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆಯು ಫೆಬ್ರವರಿ 6ರಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾ ವಸತಿ ಶಾಲೆಯ ಆಯ್ಕೆಗೆ ಅರ್ಹತೆಗಳು: ಜೂನಿಯರ್ (ಕಿರಿಯರ) ವಿಭಾಗಕ್ಕೆ 7ನೇ ತರಗತಿಯಲ್ಲಿ ಓದುತ್ತಿರುವ, 2025-26ನೇ ಸಾಲಿಗೆ ಎಂಟನೇ ತರಗತಿ ಸೇರಲು ಅರ್ಹತೆ ಹೊಂದಿರುವ ಮತ್ತು ಆಯಾ ವರ್ಷದ ಜೂನ್ 1ಕ್ಕೆ 14 ವರ್ಷ ಮೀರಿರ ಬಾಲಕ-ಬಾಲಕಿಯರು ಭಾಗವಹಿಸ ಬಹುದು. ಮುಂದಿನ ಹಂತದ ಆಯ್ಕೆಗೆ ಅರ್ಹತಾ ಮಾನದಂಡದ ಶೇ.50 ಅಂಕಗಳನ್ನು ಗಳಿಸಿರಬೇಕು.
ಕ್ರೀಡಾ ವಸತಿ ಶಾಲೆಗೆ: ಅಥ್ಲೆಟಿಕ್ಸ್, ಗುಂಡೆಸೆತ, ಎತ್ತರ ಜಿಗಿತ, ಚಕ್ರ ಎಸೆತ, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್ ಹಾಗೂ ಸೈಕ್ಲಿಂಗ್ ಕ್ರೀಡೆಗಳಲ್ಲಿ ಬಾಲಕ ಹಾಗೂ ಬಾಲಕಿಯರನ್ನು ಮತ್ತು ಫುಟ್‌ಬಾಲ್ ಹಾಗೂ ಕುಸ್ತಿ ಕ್ರೀಡೆಗಳಲ್ಲಿ ಬಾಲಕರನ್ನು ಮಾತ್ರ ಆಯ್ಕೆ ನಡೆಸಲಾಗುವುದು.
ಕ್ರೀಡಾ ವಸತಿ ನಿಲಯಗಳಿಗೆ: ಅಥ್ಲೆಟಿಕ್ಸ್, ಹಾಕಿ, ಬಾಸ್ಕೆಟ್ ಬಾಲ್, ವಾಲಿಬಾಲ್, ಜೊಡೋ ಹಾಗೂ ಸೈಕ್ಲಿಂಗ್ ಕ್ರೀಡೆಗಳಲ್ಲಿ ಯುವಕ ಮತ್ತು ಯುವತಿಯರನ್ನು ಹಾಗೂ ಫುಟ್ಬಾಲ್ ಮತ್ತು ಕುಸ್ತಿ ಕ್ರೀಡೆಗಳಲ್ಲಿ ಯುವಕರನ್ನು ಮಾತ್ರ ಆಯ್ಕೆ ನಡೆಸಲಾಗುವುದು.
ಹಿರಿಯರ ವಿಭಾಗ: 10ನೇ ತರಗತಿಯಲ್ಲಿ ಓದುತ್ತಿದ್ದು 2025-26ನೇ ಸಾಲಿಗೆ ಪ್ರಥಮ ಪಿಯುಸಿ ಸೇರಲು ಅರ್ಹತೆ ಹೊಂದಿರುವ ಮತ್ತು ಆಯಾ ವರ್ಷದ ಜೂನ್ 1ಕ್ಕೆ 18 ವರ್ಷ ಮೀರಿರಬಾರದು.
ಹಿರಿಯರ ವಿಭಾಗದ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಅಭ್ಯರ್ಥಿಗಳನ್ನು ನೇರವಾಗಿ ವಿಭಾಗ ಮಟ್ಟದಲ್ಲಿ ಆಯ್ಕೆ ಮಾಡುವುದರಿಂದ ಅಭ್ಯರ್ಥಿಗಳು ನಿಗದಿ ಪಡಿಸಿದ ನಮೂನೆಯಲ್ಲಿ ವೈದ್ಯಕೀಯ ಪ್ರಮಾಣಪತ್ರ, ಧೃಢೀಕರಿಸಿದ ಜನನ ಪ್ರಮಾಣಪತ್ರ ಹಾಗೂ ಅರ್ಜಿಯೊಂದಿಗೆ ಫೆಬ್ರವರಿ 10ರಂದು ನಗರದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಲಾ ಗುವ ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸ ಬಹುದಾಗಿದೆ.
ವಿಭಾಗ ಮಟ್ಟದ ಆಯ್ಕೆ ಪ್ರಕ್ರಿಯೆಯು ಕಿರಿಯ ವಿಭಾಗ (14 ವರ್ಷ ದೊಳಗಿನ)ದಲ್ಲಿ ಫೆಬ್ರವರಿ 10ರಂದು ಹಾಗೂ ಹಿರಿಯ ವಿಭಾಗ (18 ವರ್ಷದೊಳಗಿನ)ದಲ್ಲಿ ಫೆಬ್ರವರಿ 11ರಂದು ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಅಥ್ಲೆಟಿಕ್ಸ್ ತರಬೇತುದಾರ ಅನಂತರಾಮ್ ಮೊ.ನಂ. 9448984729 ಹಾಗೂ ವಾಲಿಬಾಲ್ ತರಬೇತುದಾರ ರಾಜೇಶ್ ಪತ್ತಾರ್ ಮೊ.ನಂ.9241249233 ಅನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.