×
Ad

ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ವತಿಯಿಂದ ಅನುಸ್ಮರಣಾ ಮಜ್ಲಿಸ್

Update: 2025-10-21 15:05 IST

ಉಡುಪಿ, ಅ.21: ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ವತಿಯಿಂದ ಮೆಹಫಿಲೆ ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ), ಆಲಾ ಹಝ್ರತ್ ಇಮಾಮ್ ಅಹಮದ್ ರಝಾ ಖಾನ್ ಬರೇಲ್ವಿ (ಖ.ಸ), ತಾಜುಲ್ ಉಲಮಾ (ಖ.ಸಿ), ಖಾಝಿ ತಾಜುಲ್ ಫುಖಹಾ (ನ.ಮ) ಹಾಗೂ ಅಗಲಿದ ಉಲಮಾ ಆಧ್ಯಾತ್ಮಿಕ ನಾಯಕರ ಅನುಸ್ಮರಣಾ ಮಜ್ಲಿಸ್ ಕಾರ್ಯಕ್ರಮವು ಉಡುಪಿ ಅಂಜುಮಾನ್ ಮಸೀದಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಮಾಜಿ ಅಧ್ಯಕ್ಷ ಸೈಯ್ಯೆದ್ ಯೂಸುಫ್ ನವಾಝ್ ಅಲ್ ಹುಸೈನಿ ನೂರಿ ಹೂಡೆ ತಂಙಲ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಅಧ್ಯಕ್ಷ ಇಮ್ತಿಯಾಝ್ ಸಂತೋಷ್ ನಗರ ವಹಿಸಿದ್ದರು. ಇಸ್ಮಾಈಲ್ ನಈಮಿ ಹೂಡೆ ದುವಾ ನೆರವೇರಿಸಿದರು.

ಮಾಲಿಕ್ ದೀನಾರ್ ದಅವಾ ದರ್ಸ್ ಇದರ ಮುದರ್ರಿಸ್ ಆಶಿಕ್ ಸಖಾಫಿ ಮಲ್ಹರಿ ಕನ್ನಡದಲ್ಲಿ ಹಾಗೂ ಖಾದಿಮಿ ಜಾಮಿಅ ಮಸೀದಿ, ಮಲ್ಲಾರ್ ಇಮಾಮ್ ಹಝ್ರತ್ ಹಾಫಿಝ್ ಖಾರಿ ಮೌಲಾನ ಮುಪ್ತಿ ಮೆಹಬೂಬ್ ಆಲಿಖಾನ್ ಉರ್ದುವಿನಲ್ಲಿ ಪ್ರವಚನಗೈದರು.

ಅಂಜುಮಾನ್ ಮಸೀದಿಯ ಇಮಾಮ್ ಆದ ಮೌಲಾನ ಹಾಫಿಝ್ ಮೌಲಾ ಅಲಿ ರಝ್ವಿ ನಅತೇ ಶರೀಫ್ ಆಲಾಪನೆ ಮಾಡಿದರು. ಅಸ್ಸಯ್ಯೆದ್ ಜುನೈದ್ ಅರ್ರಫಾಯಿ ಉಡುಪಿ ತಂಙಲ್ ಅನುಸ್ಮರಣಾ ಮಜ್ಲಿಸ್‌ನ ನೈತೃತ್ವ ವಹಿಸಿದ್ದರು.

ಮುಸ್ಲಿಂ ಜಮಾಅತ್ ರಾಜ್ಯ ನಾಯಕ ಅಡ್ವಕೇಟ್ ಹಂಝತ್ ಉಡುಪಿ, ಮಾಜಿ ಡಿವಿಷನ್ ಅಧ್ಯಕ್ಷ ಅಬ್ದುರ‌್ರಹ್ಮಾನ್ ಸಅದಿ, ಅಂಜುಮಾನ್ ಮಸೀದಿ ಅಧ್ಯಕ್ಷ ವಾಹಿದ್, ಕಾರ್ಯಕ್ರಮ ಸಮಿತಿ ಗೌರವಧ್ಯಕ್ಷ ರಝಾಕ್ ಮದದಿ ಅಂಬಾಗಿಲು, ರಫೀಕ್ ದೊಡ್ಡಣಗುಡ್ಡೆ, ಸಮಿತಿ ಕೋಶಾಧಿಕಾರಿ ಮಜೀದ್ ಕಟಪಾಡಿ, ಶಂಶುದ್ದೀನ್ ರಂಗನಕೆರೆ, ನಝೀರ್ ಸಾಸ್ತಾನ, ಎಸ್‌ವೈಎಸ್ ಕಾರ್ಯದರ್ಶಿ ತೌಪೀಕ್ ಅಂಬಾಗಿಲು, ನಾಸೀರ್ ಬಿಕೆ, ಡಿವಿಷನ್ ಕೋಶಾಧಿಕಾರಿ ಮುತ್ತಲಿಬ್ ರಂಗನಕೆರೆ, ತಂಝಿಲ್ ಮಲ್ಪೆ, ಆಸೀಫ್ ಸರಕಾರಿಗುಡ್ಡೆ, ಮೀಡಿಯಾ ಕಾರ್ಯದರ್ಶಿ ಆಶಿಕ್ ಸರಕಾರಿಗುಡ್ಡೆ, ಇಬ್ರಾಹಿಂ ರಂಗನಕೆರೆ, ಮುಸ್ತಫಾ ಸರಕಾರಿಗುಡ್ಡೆ, ಬಿಲಾಲ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ಸಿದ್ದೀಕ್ ಸಂತೋಷ್ ನಗರ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News