×
Ad

ಉಡುಪಿ ನೇತ್ರಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆರು ರ‍್ಯಾಂಕ್

Update: 2025-03-01 15:41 IST

ಉಡುಪಿ, ಮಾ.1: ಅರೆ ವೈದ್ಯಕೀಯ ಶಿಕ್ಷಣ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ ಗಳಲ್ಲಿ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಉಡುಪಿಯ ನೇತ್ರಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯೂ ರಾಜ್ಯಮಟ್ಟದಲ್ಲಿ ಆರು ರ‍್ಯಾಂಕ್ ಗಳನ್ನು ಗಳಿಸಿದ್ದಾರೆ.

ಅಲೈಡ್ ಹೆಲ್ತ್ ಸೈನ್ಸ್ ವಿಭಾಗದ ಬ್ಯಾಚುಲರ್ ಇನ್ ಪಬ್ಲಿಕ್ ಹೆಲ್ತ್ ನಲ್ಲಿ ರಕ್ಷಿತಾ ಹಾಗೂ ಲಾವಣ್ಯಾ ಕ್ರಮವಾಗಿ ಒಂದನೇ ಮತ್ತು ಮೂರನೇ ರ‍್ಯಾಂಕ್, ಬ್ಯಾಚುಲರ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ನಲ್ಲಿ ಪುರುಷೋತ್ತಮ ಬಡಿಗೇರ್, ಅಭಿಷೇಕ್ ಹಾಗೂ ಕಾವ್ಯಾ ಎಂ. ನಾಯ್ಕ ಕ್ರಮವಾಗಿ ನಾಲ್ಕನೇ, ಆರನೇ ಹಾಗೂ ಎಂಟನೇ ರ‍್ಯಾಂಕ್ ಪಡೆದಿದ್ದಾರೆ.

ಆಪರೇಶನ್ ಥಿಯೇಟರ್ ಮತ್ತು ಅರಿವಳಿಕೆ ತಂತ್ರಜ್ಞಾನದಲ್ಲಿ ಗಗನ್ ಯು. ಎಸ್. ಎಂಟನೇ ರ‍್ಯಾಂಕ್ ಪಡೆದಿದ್ದಾರೆ. ಅಲ್ಲದೇ ಬಿಎಸ್ಸಿ ವಿಭಾಗದಲ್ಲಿ 10 ವಿದ್ಯಾರ್ಥಿಗಳು ಹಾಗೂ ಅರೆವೈದ್ಯಕೀಯ ವಿಭಾಗದಲ್ಲಿ 12 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. ಈ ಸಾಧೆನೆಗೆ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಕೃಷ್ಣಪ್ರಸಾದ್ ಕೂಡ್ಲು, ಅಧ್ಯಕ್ಷೆ ರಶ್ಮಿ ಕೃಷ್ಣಪ್ರಸಾದ್ ಹಾಗೂ ನಿರ್ದೇಶಕ ರಘುರಾಮ್ ರಾವ್ ವಿದ್ಯಾರ್ಥಿ ಹಾಗೂ ಬೋಧಕ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News