×
Ad

ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು: ಶಿವಸುಂದರ್

Update: 2024-09-20 18:00 IST

ಉಡುಪಿ, ಸೆ.20: ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಮೈಗೂಡಿಸಿ ಕೊಳ್ಳಬೇಕು. ಸಮಾಜದಲ್ಲಿ ಯಾರೇ ಏನು ಮಾತನಾಡಿದರೂ ಅದನ್ನು ಸುಮ್ಮನೇ ನಂಬದೆ ಅದರ ಕುರಿತು ಪ್ರಶ್ನಿಸಿ ವಿಚಾರಿಸಿ ಅರಿವು ಹೆಚ್ಚಿಸಿಕೊಳ್ಳಬೇಕು ಎಂದು ಅಂಕಣಗಾರ ಶಿವಸುಂದರ್ ಹೇಳಿದ್ದಾರೆ.

ಹೂಡೆ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಎಪಿಸಿಆರ್ ಉಡುಪಿ ಜಿಲ್ಲಾ ವತಿಯಿಂದ ವಿದ್ಯಾರ್ಥಿ ಗಳಿಗಾಗಿ ಆಯೋಜಿಸ ಲಾದ ಕಾನೂನು ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.

ಇವತ್ತು ಸಮಾಜದಲ್ಲಿ ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ದೇಶದ ದೊಡ್ಡ ಮಟ್ಟದ ಸಂಪನ್ಮೂಲ ಕೆಲವೇ ಕೆಲವು ಉದ್ಯಮಿಗಳ ಮುಷ್ಠಿಯಲ್ಲಿದೆ. ಇದು ಸಮ ಸಮಾಜದ ನಿರ್ಮಾಣಕ್ಕೆ ತೊಡಕಾಗಿದೆ ಎಂದು ಅವರು ತಿಳಿಸಿದರು.

ಪ್ರತಿಭೆಯಿದ್ದರೂ ಸೂಕ್ತ ಶ್ರೈಕ್ಷಣಿಕ ಅವಕಾಶ ಇಲ್ಲದೇ ಇರುವುದರಿಂದ ಹಲವು ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿ ದ್ದಾರೆ. ಸಂವಿಧಾನ ಅವಕಾಶ ಕೊಟ್ಟಿದ್ದರೂ ವ್ಯವಸ್ಥೆಯ ಹುಳುಕಿನ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ. ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡಾಗ ಈ ಹುಳುಕುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಹೈಕೋರ್ಟ್ ವಕೀಲ ವಿನಯ ಶ್ರೀವಾಸ್ತವ್ ಸಂವಿಧಾನ ಪೀಠಿಕೆಯ ಕುರಿತು ಅರಿವು ಮೂಡಿಸಿದರು. ಯಾಸೀನ್ ಕೋಡಿ ಬೆಂಗ್ರೆ ಪ್ರಸ್ತಾವಿಕವಾಗಿ ಭಾಷಣ ಮಾಡಿದರು. ಝೀಫಾ ನಾಝ್ ಸ್ವಾಗತಿಸಿದರು. ಆಯಿಶಾ ಫಾಝಿಯಾ ಕಿರಾತ್ ಪಠಿಸಿ ದರು. ಆಯಿಶಾ ಸೀಮಾಝ್ ಕಾರ್ಯಕ್ರಮ ನಿರೂಪಿಸಿದರು. ಆಯಿಶಾ ಫಾಝಿಯಾ ವಂದಿಸಿದರು.

ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಬೀನಾ, ಎಪಿಸಿಆರ್ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಮೊಗವೀರ, ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಇದ್ರಿಸ್ ಹೂಡೆ, ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News