ಪರ್ಕಳ ಪೇಟೆಯಲ್ಲಿ ಸೂಪರ್ ಮೂನ್ ವಿಕ್ಷಣೆ
Update: 2026-01-04 19:37 IST
ಉಡುಪಿ, ಜ.4: ಈ ಬಾರಿಯ ಸೂಪರ್‌ಮೂನ್‌ನ್ನು ರೂವಾರಿ ಆರ್.ಮನೋಹಕರ್ ಅವಿಷ್ಕರಿಸಿದ ದೂರದರ್ಶಕದ ಮೂಲಕ ಪರ್ಕಳ ರಾಷ್ಟ್ರೀಯ ಹೆದ್ದಾರಿಯ ಬಳಿ ವೀಕ್ಷಿಸಲಾಯಿತು.
ಕಾರ್ಯಕ್ರಮವನ್ನು ಆಯುಷ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ತಾಲೂಕು ಕಾರ್ಯದರ್ಶಿ, ಆಯುರ್ವೇದ ವೈದ್ಯ ಡಾ.ಸಂದೀಪ್ ಸನಿಲ್ ಮೂಡನಿಡಂಬೂರು. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಡುಪಿಯ ಠಾಣಾ ಎಎಸ್ಸೈ ಕಿಶೋರ್, ಕಾರ್ಯಕ್ರಮ ಸಂಘಟಕ ಗಣೇಶ್‌ರಾಜ್ ಸರಳೆಬೆಟ್ಟು, ಅಣ್ಣಪ್ಪ ಕರ್ಕೇರ, ರಾಜೇಶ್ ಪ್ರಭು ಪರ್ಕಳ, ಸುಧೀರ್ ಶೆಟ್ಟಿ ಹಿರಿಯಡ್ಕ, ಸುರೇಶ ಆಚಾರ್ಯ ಪರ್ಕಳ, ಶಮಿತ್ ಶೆಟ್ಟಿ, ಜಯ ದೀಪ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಸಾರ್ವಜನಿಕರು, ವಿದ್ಯಾರ್ಥಿಗಳು ಸೂಪರ್ ಮೂನ್ ಅನ್ನು ಬಹಳ ಹತ್ತಿರದಲ್ಲಿ ವೀಕ್ಷಿಸಿದರು. ಮೋಡ ಕವಿದ ವಾತಾವರಣದಿಂದ ಚಂದ್ರ ಆಗಾಗ್ಗೆ ಮರೆಯಾಗುತ್ತಿತ್ತು.