×
Ad

ಮತ್ಸ್ಯಗಂಧ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕ ಹೆಚ್ಚುವರಿ ಕೋಚ್

Update: 2023-09-08 20:50 IST

ಸಾಂದರ್ಭಿಕ ಚಿತ್ರ

ಉಡುಪಿ, ಸೆ.8: ಜನರ ವಿಪರೀತ ಬೇಡಿಕೆಯನ್ನು ಪರಿಗಣಿಸಿ ಮಂಗಳೂರು ಸೆಂಟ್ರಲ್ ಹಾಗೂ ಮುಂಬೈಯ ಲೋಕಮಾನ್ಯ ತಿಲಕ್ ನಡುವೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕ ಹೆಚ್ಚುವರಿ ಕೋಚ್ ಒಂದನ್ನು ಅಳವಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.

ಮಂಗಳೂರು ಸೆಂಟ್ರಲ್‌ನಿಂದ ಸೆ.8 ಮತ್ತು ಸೆ.15ರ ಶುಕ್ರವಾರದಂದು ಹೊರಡುವ ಹಾಗೂ ಮುಂಬೈಯಿಂದ ಸೆ.9 ಹಾಗೂ 16ರಂದು ಹೊರಡುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿಗೆ ಒಂದು ತ್ರಿಟಯರ್ ಎಸಿ ಕೋಚ್ ಅಳವಡಿಸಲಾಗುತ್ತಿದೆ. ಇದರಿಂದ ರೈಲಿನ ಕೋಚ್‌ಗಳ ಸಂಖ್ಯೆ 24ಕ್ಕೇರಲಿದೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News