×
Ad

ವಾಹನ ಸಂಚಾರ ತಾತ್ಕಾಲಿಕ ನಿಷೇಧ

Update: 2023-08-05 21:12 IST

ಸಾಂದರ್ಭಿಕ ಚಿತ್ರ

ಉಡುಪಿ, ಆ.5: ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ಮಷಮರ್ಧಿನಿ ದೇವಸ್ಥಾನ ರಸ್ತೆಯನ್ನು ಅಗಲೀಕರಣಗೊಳಿಸಿ, ರಸ್ತೆ ಕಾಂಕ್ರಿಟೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಯನ್ನು ನಗರಸಭೆ ಹಾಗೂ ಪಿಡ್ಲ್ಯೂಡಿ ಇಲಾಖೆ ವತಿಯಿಂದ ನಿರ್ವಹಿಸಲಾಗುತ್ತಿದೆ. ಹೀಗಾಗಿ ಸದ್ರಿ ರಸ್ತೆಯಲ್ಲಿ ಆಗಸ್ಟ್ 6ರಿಂದ ಸೆಪ್ಟಂಬರ್ 5ರವರೆಗೆ ವಾಹನ ಸಂಚಾರವನ್ನು ತಾತ್ಕಾ ಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬದಲಿ ಮಾರ್ಗವಾಗಿ ಕಿನ್ನಿಮೂಲ್ಕಿ ಗೋಪುರದಿಂದ ಬಲೈಪಾದೆ ಜಂಕ್ಷನ್‌ನಿಂದ ಮುಂದೆ ಎಡಕ್ಕೆ ಹಾಗೂ ಚಿಟ್ಪಾಡಿ ಹನು ಮಾನ್ ಗ್ಯಾರೇಜ್ ರಸ್ತೆಯಿಂದ ವಾಹನಗಳು ಸಂಚರಿಸಬಹುದಾಗಿದ್ದು,ಸಾರ್ವಜನಿಕರು ನಗರಸಭೆ ಯೊಂದಿಗೆ ಸಹಕರಿಸು ವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News