×
Ad

ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

Update: 2023-07-31 21:32 IST

ಮಲ್ಪೆ, ಜು.31: ಗುಜ್ಜರಬೆಟ್ಟು ರಾಘವೇಂದ್ರ ಭಜನಾ ಮಂದಿರದ ಹಿಂಭಾಗ ಕಡಲ ಕಿನಾರೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ವೇಳೆ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ಎರಡು ದಿನಗಳ ಬಳಿಕ ಇಂದು ಪತ್ತೆಯಾಗಿದೆ.

ಮೃತರನ್ನು ಕೆಮ್ಮಣ್ಣು ನಿವಾಸಿ ರಾಘವೇಂದ್ರ ಪೂಜಾರಿ(44) ಎಂದು ಗುರುತಿಸಲಾಗಿದೆ. ಜು.29ರಂದು ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಇವರು, ಆಕಸ್ಮಿಕ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು. ಇಂದು ಮಧ್ಯಾಹ್ನ ಇವರ ಮೃತದೇಹವು ಮಲ್ಪೆ ಪಡುಕೆರೆ ಸಮುದ್ರದಲ್ಲಿ ಕಂಡುಬಂದಿದ್ದು, ಆಪತ್ಭಾಂಧವ ಈಶ್ವರ ಮಲ್ಪೆಸಮುದ್ರಕ್ಕೆ ಇಳಿದು ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಶಬ್ಬೀರ್ ಮಲ್ಪೆ, ರಕ್ಷಿತ್ ಕಾಪು, ದೀಪು ಮಲ್ಪೆ, ಇಮ್ತಿಯಾಝ್ ಕೆಮಣ್ಣು, ಪ್ರತಾಪ್ ಪಡುಕೆರೆ, ಪ್ರವೀಣ್ ಮಲ್ಪೆ, ಹರ್ಷಿತ್ ಜೆ.ಕುಂದರ್ ಭಾಗಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News