ಬೈಂದೂರು, ನ.27: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ನ.26ರಂದು ಬೆಳಗ್ಗೆ ಶಿರೂರು ಗ್ರಾಮದ ಮದ್ರಾಮಕ್ಕಿ ಎಂಬಲ್ಲಿ ನಡೆದಿದೆ.

ಶಿವರಾಮ ಪೂಜಾರಿ ಎಂಬವರ ಬಾಡಿಗೆ ಮನೆಯ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ಕೋಣೆಯ ಕಾಪಾಟಿನಲ್ಲಿದ್ದ ಒಟ್ಟು 90000ರೂ. ನಗದು ಮತ್ತು 10 ಗ್ರಾಂ ತೂಕದ ಸಣ್ಣ ಕರಿಮಣಿ ಸರ ಮತ್ತು 4 ಗ್ರಾಂ ತೂಕದ ಚಿನ್ನದ ಉಂಗುರ ಮತ್ತು ಬೆಳ್ಳಿಯ ಕಾಲು ಚೈನು ಒಂದು ಜೊತೆ ಮತ್ತು ಬೆಳ್ಳಿಯ ಚೈನ್ ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 240000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor