ಕೆ.ಪಿ.ಎಸ್.ಕೊಕ್ಕರ್ಣೆ ಶಾಲೆಗೆ ಅಗ್ರ ಪ್ರಶಸ್ತಿ| ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವದಲ್ಲಿ ಹಳ್ಳಿಯ ಮಕ್ಕಳಿಗೆ ರಾಷ್ಟ್ರೀಯ ಕಿರೀಟ
ಉಡುಪಿ: ಕೋಲ್ಕತ್ತಾದ ಬಿರ್ಲಾ ಇಂಡಸ್ಟ್ರಿಯಲ್ ಆಂಡ್ ಟೆಕ್ನಲಾಜಿಕಲ್ ಮ್ಯೂಸಿಯಂನಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ರೌಢ ಶಾಲಾ ವಿಜ್ಞಾನ ನಾಟಕೋತ್ಸವದಲ್ಲಿ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಕೆ.ಪಿ.ಎಸ್. ಕೊಕ್ಕರ್ಣೆ ವಿದ್ಯಾರ್ಥಿ ಗಳು ಅಭಿನಯಿಸಿದ ನಾಟಕ 'ಕ್ಯೂರಿಯಸ್' ಅತ್ಯುತ್ತಮ ನಾಟಕ ಪ್ರಶಸ್ತಿ ಪದಕದೊಂದಿಗೆ 10,000 ರೂ , ನಗದು ಬಹುಮಾನವನ್ನು ಗೆದ್ದು ಕೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಶಿಕ್ಷಕ ವರದರಾಜ್ ಬಿರ್ತಿ ರಚಿಸಿರುವ ಈ ನಾಟಕಕ್ಕೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ರೋಹಿತ್ ಎಸ್.ಬೈಕಾಡಿ ಪಡೆದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಗೆದ್ದು , ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದು, ದಕ್ಷಿಣ ಭಾರತ ವಿಭಾಗ ಮಟ್ಟದಲ್ಲೂ ವಿಜಯಿಯಾಗಿ ಕೊನೆಗೆ ಭಾರತದ ವಿವಿಧ ವಿಭಾಗಗಳಿಂದ ಗೆದ್ದು ಬಂದ ತಂಡಗಳ ಪ್ರಧರ್ಶನಲ್ಲಿ , ಖಾಸಗೀ ಶಾಲೆಗಳ ಸ್ಪರ್ಧೆ ಗಳನ್ನೂ ಮೀರಿ ನಿಂತು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸರಕಾರಿ ಕೆಪಿಎಸ್ ಕೊಕ್ಕರ್ಣೆ ಶಾಲೆ ಸಾಧನೆ ಮಾಡಿದೆ.
ಶಾಲೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಾದ ಪೌರ್ಣಮಿ , ಪಂಚಮಿ , ಶ್ರಾವ್ಯ , ಶ್ರಾವ್ಯ ರಮೇಶ ಪೂಜಾರಿ, ನವಮಿ , ಭವೀಶ್ ಎಂ ಶೆಟ್ಟಿ , ಸ್ವಸ್ತಿಕ್ , ಸೌಜನ್ಯ , ಇವರು ಅಭಿನಯಿಸಿದ ನಾಟಕ " ಕ್ಯೂರಿಯಸ್ " ಅತ್ಯುತ್ತಮ ನಾಟಕ ಪ್ರಶಸ್ತಿ ಪಡೆಯಿತು. ಕೊಲ್ಕತ್ತದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿರ್ಧೇಶಕರಾದ ರೋಹಿತ್ ಬೈಕಾಡಿ , ಶಿಕ್ಷಕರಾದ ವರದರಾಜ್ ಬಿರ್ತಿ, ಹರೀಶ್ ಕುಮಾರ್, ಹೆತ್ತವರ ಕಡೆಯಿಂದ ನಂದಿನಿ ಭಾಗವಹಿಸಿದ್ದರು.