ಹಳಿ ನಿರ್ವಹಣೆ: ರೈಲು ಸಂಚಾರದಲ್ಲಿ ವ್ಯತ್ಯಯ
Update: 2023-11-13 19:23 IST
ಫೈಲ್ ಫೋಟೊ
ಉಡುಪಿ, ನ.13: ಕೊಂಕಣ ರೈಲು ಮಾರ್ಗದ ಮಡಗಾಂವ್ ಮತ್ತು ಕುಮಟಾ ನಡುವೆ ಹಳಿಗಳ ನಿರ್ವಹಣಾ ಕಾರ್ಯ ನ.16ರ ಗುರುವಾರ ಅಪರಾಹ್ನ 12ರಿಂದ 3ರವರೆಗೆ ಮೂರು ಗಂಟೆಗಳ ಕಾಲ ನಡೆಯಲಿರು ವುದರಿಂದ ಈ ಅವಧಿಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ನ.16ರಂದು ಮಂಗಳೂರು ಮತ್ತು ಮಡಗಾಂವ್ ನಡುವೆ ಸಂಚರಿಸುವ ದೈನಂದಿನ ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ವಿಶೇಷ ರೈಲಿನ (ರೈಲು ನಂ.06602-06601) ಸಂಚಾರ ಕುಮಟಾ ನಿಲ್ದಾಣದಲ್ಲಿ ಮುಕ್ತಾಯಗೊಂಡು, ಬಳಿಕ ನಿಗದಿತ ಸಮಯಕ್ಕೆ ಕುಮಟಾದಿಂದಲೇ ಮರು ಪ್ರಯಾಣ ಪ್ರಾರಂಭಿಸಲಿದೆ. ಹೀಗಾಗಿ ಈ ರೈಲಿನ ಕುಮಟಾ ಮತ್ತು ಮಡಗಾಂವ್ ನಡುವಿನ ಸಂಚಾರ ದಿನದ ಮಟ್ಟಿಗೆ ರದ್ದುಗೊಳ್ಳಲಿದೆ ಎಂದು ಪ್ರಕಟಣ ತಿಳಿಸಿದೆ.