×
Ad

ಉಡುಪಿ | ರೋಗಿಗೆ ಸಿಗಲಿಲ್ಲ ಆಂಬುಲೆನ್ಸ್ 108! : ಗೂಡ್ಸ್ ಟೆಂಪೋದಲ್ಲಿ ರೋಗಿ ಆಸ್ಪತ್ರೆಗೆ

Update: 2025-12-08 11:02 IST

ಉಡುಪಿ ಡಿ.8: ಉಡುಪಿ ನಗರದ ಉದ್ಯಾವರದಲ್ಲಿ ಅಸ್ವಸ್ಥಗೊಂಡ ರೋಗಿಯೊಬ್ಬರಿಗೆ ರಾತ್ರಿ 7:00 ಗಂಟೆಯಿಂದ 9 :30 ಗಂಟೆಯವರೆಗೆ ಯಾವುದೇ ಅಂಬುಲೆನ್ಸ್ ಸಿಗದ ಕಾರಣ ವಿಶು ಶೆಟ್ಟಿ ಅಂಬಲಪಾಡಿ ಅವರು ತನ್ನ ಗೂಡ್ಸ್ ಟೆಂಪೋದಲ್ಲಿ ಮಂಚ ಇರಿಸಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ .

ರೋಗಿಯ ಸಂಬಂಧಪಟ್ಟವರು108 ಅಂಬುಲೆನ್ಸ್ ಗೆ ಕರೆ ಮಾಡಿದಾಗ ಅಂಬುಲೆನ್ಸ್ ಲಭ್ಯವಿರಲಿಲ್ಲ. ಖಾಸಗಿ ಅಂಬುಲೆನ್ಸ್ ಗಳು ಕೂಡ ಲಭ್ಯವಿಲ್ಲದಿರುವುದರಿಂದ ರೋಗಿಯ ಕಡೆಯವರು ವಿಶು ಶೆಟ್ಟಿ ಅವರನ್ನು ಸಂಪರ್ಕಿಸಿದ್ದಾರೆ. ವಿಶು ಶೆಟ್ಟಿ ಕೂಡ ಖಾಸಗಿ ಆಂಬುಲೆನ್ಸ್ ಸಂಪರ್ಕಿಸಿಯು ಅಂಬುಲೆನ್ಸ್ ಸಿಗದೇ ಇರುವುದರಿಂದ ರೋಗಿ ತೀರ ಚಿಂತಾ ಜನಕ ಪರಿಸ್ಥಿತಿ ತಲುಪಿದ್ದರಿಂದ ಬೇರೆ ದಾರಿ ಕಾಣದೆ ತನ್ನ ಗೂಡ್ಸ್ ಟೆಂಪೋ ಗೆ ಮಂಚ ಇರಿಸಿ ಅದರ ಮುಖಾಂತರ ರೋಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಕಳೆದ ಒಂದು ವರುಷದಿಂದ 108 ಅಂಬುಲೆನ್ಸ್ ಸರಿಯಾಗಿ ಲಭ್ಯ ಇಲ್ಲದಿರುವುದರಿಂದ ನೂರಾರು ರೋಗಿಗಳು ಮೃತಪಟ್ಟಿದ್ದಾರೆ. ಈ ಬಗ್ಗೆ ನಾನು ಕಳೆದ ಒಂದು ವರ್ಷದಿಂದ ಸರಕಾರದ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನ ಆಗಲಿಲ್ಲ. ಈ ಘಟನೆಯಲ್ಲಿ ಕೂಡ ಎರಡುವರೆ ಗಂಟೆ ಅಂಬುಲೆನ್ಸ್ ಸಿಗದೇ ರೋಗಿ ಚಿಂತಾ ಜನಕ ಪರಿಸ್ಥಿತಿ ತಲುಪಿದ್ದು, ವಿಧಿ ಇಲ್ಲದೆ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಕರೆದುಕೊಂಡು ಹೋಗಬೇಕಾಯಿತು. ಇನ್ನಾದರೂ ಸರಕಾರ, ಜಿಲ್ಲಾಡಳಿತ ಈ ಬಗ್ಗೆ ಕ್ರಮ ತೆಗೆದುಕೊಂಡು ಸಹಕರಿಸಬೇಕು. ಸಾರ್ವಜನಿಕರ ಪ್ರಾಣವನ್ನು ನಿರ್ಲಕ್ಷಿಸಬಾರದು ಉಡುಪಿ ಜಿಲ್ಲೆಯಲ್ಲಿ 108 ಆಂಬುಲೆನ್ಸ್ 18 ಇದ್ದರೂ ಸೇವೆಗೆ ಸಿಗುವುದು ಐದರಿಂದ ಆರು ಮಾತ್ರ.

-ವಿಶು ಶೆಟ್ಟಿ ಅಂಬಲಪಾಡಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News