ಉಡುಪಿ: ಟ್ರೇಡಿಂಗ್ ಆ್ಯಪ್ ಮೂಲಕ ಉದ್ಯಮಿಗೆ 1.39ಕೋಟಿ ರೂ. ವಂಚನೆ
Update: 2024-01-16 12:06 IST
Photo: freepik
ಉಡುಪಿ, ಜ.16: ಉದ್ಯಮಿಯೊಬ್ಬರಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಟ್ರೇಡಿಂಗ್ ಆ್ಯಪ್ ಮೂಲಕ ಕೋಟ್ಯಂತ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲೆವೂರಿನ ವೆಂಕಟರಮಣ ಎಂಬವರಿಗೆ ಅಪರಿಚಿತ ವ್ಯಕ್ತಿಗಳು ಟ್ರೇಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಆ್ಯಪ್ ಲಿಂಕನ್ನು ವಾಟ್ಸಾಪ್‌ನಲ್ಲಿ ಕಳುಹಿಸಿದ್ದರು. ಇದನ್ನು ನಂಬಿದ ವೆಂಕಟರಮಣ ಲಿಂಕ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ನಮೂದಿಸಿದ್ದರು.
ಬಳಿಕ ಆರೋಪಿಗಳು ಹಣ ಹೂಡಿಕೆ ಮಾಡಲು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಡಿ.5ರಿಂದ ಜ.9ರತನಕ ಹಂತ ಹಂತವಾಗಿ 1,38,99,000ರೂ. ಹಣವನ್ನು ಪಾವತಿಸಿದ್ದರು. ಆದರೆ ಅಪರಿಚಿತ ವ್ಯಕ್ತಿಗಳು ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನು ನೀಡದೇ ವೆಂಕಟರಮಣ ಅವರಿಗೆ ಮೋಸ ಮಾಡಿರುವುದಾಗಿ ದೂರಲಾಗಿದೆ.