×
Ad

ಉಡುಪಿ: ಬೋಟ್ ನಲ್ಲಿ ಆಕಸ್ಮಿಕ ಬೆಂಕಿ; ಕೋಟ್ಯಂತರ ರೂ. ನಷ್ಟ

Update: 2023-11-13 12:13 IST

ಉಡುಪಿ: ಲಂಗರು ಹಾಕಿದ್ದ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಂಡು ಕೋಟ್ಯಾಂತರ ರೂಪಾಯಿ ನಷ್ಟವಾಗಿರುವ ಘಟನೆ ಗಂಗೊಳ್ಳಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಗಂಗೊಳ್ಳಿ ಮೀನುಗಾರಿಕಾ ಬಂದರು ಪರಿಸರದಲ್ಲಿ ದೀಪಾವಳಿ ಪ್ರಯುಕ್ತ ಪೂಜೆ ನಡೆಯುತ್ತಿದ್ದ ವೇಳೆ ಬೆಂಕಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಅಕ್ಕ ಪಕ್ಕದ ಏಳು ಮೀನುಗಾರಿಕಾ ಬೋಟುಗಳು, ಎರಡು ಬೈಕ್ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಬಲೆ ಸುಟ್ಟು ಕರಕಲಾಗಿವೆ ಎಂದು ತಿಳಿದು ಬಂದಿದೆ.

ಪಟಾಕಿ ಸಿಡಿದು ಬೆಂಕಿ ಹಬ್ಬಿರಬಹುದೇ ಎಂಬ ಸಂಶಯ ವ್ಯಕ್ತವಾಗಿದ್ದು, ಸ್ಥಳೀಯ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆ ನಡೆದಿದೆ.

ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅನಾಹುತಕ್ಕೆ ಅಂದಾಜು 5 ಕೋಟಿಗೂ ಅಧಿಕ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News