×
Ad

ಉಡುಪಿ: ಬಾಲಕ- ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ

Update: 2023-07-28 15:24 IST

ಉಡುಪಿ: ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಾಣಾಧಿಕಾರಿ ಕಛೇರಿ ಹಾಗೂ ಎಮ್. ಇ.ಟಿ ಆಂಗ್ಲ ಮಾಧ್ಯಮ ಶಾಲೆ ಉದ್ಯವಾರ ಮತ್ತು ಜೆಶ್ಮ ಬ್ಯಾಡ್ಮಿಂಟನ್ ಅಕಾಡೆಮಿಯ ಆಶ್ರಯದಲ್ಲಿ ಉಡುಪಿ ವಲಯದ ಬಾಲಕ -ಬಾಲಕಿಯರ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಉದ್ಯಾವರ ದ ಜೆಶ್ಮ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಶುಕ್ರವಾರ ನಡೆಯಿತು.

ಸಮಾರಂಭದ ಅಧ್ಯಕ್ಷ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಚ್. ಚಂದ್ರೇಗೌಡ, ದೀಪ ಬೆಳಗಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಹೆಚ್.ಗೋಪಾಲ್ ಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉಡುಪಿ ಜಿಲ್ಲೆಯ ಉಪಾಧ್ಯಕ್ಷ ರಾದ ಶ್ರೀ ಸುಭಾಸ್ ಚಂದ್ರ ಹೆಗಡೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಪು ತಾಲೂಕಿನ ಕ್ರೀಡಾಧಿಕಾರಿ ರೀತೇಶ್ ಕುಮಾರ್ ಶೆಟ್ಟಿ, ಉದ್ಯಾವಾರ ಗ್ರಾಮ್ ಪಂಚಾಯಿತಿ ನ ಸದಸ್ಯರಾದ ರಿಯಾಸ್ ಪಳ್ಳಿ ಉದ್ಯಾವಾರ, ಜೆಶ್ಮ ಬ್ಯಾಡ್ಮಿಂಟನ್ ಅಕಾಡೆಮಿಯ ಮಾಲಕರಾದ ಗುರುರಾಜ್ ಸಾಲಿಯಾನ್ ಹಾಗೂ ಶಾಲಾ ಶೈಕ್ಷಣಿಕ ಮುಖ್ಯಸ್ಥೆಯಾದ ಡಾ.ಜುನೈದಾ ಸುಲ್ತಾನ್ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ.ಸವಿತಾ ಆಚಾರ್ಯ ಉಪಸ್ಥಿತರಿದ್ದರು .

ಶ್ರೀಮತಿ ಜಾಕ್ಷಿನ್ ಪಾಂಗ್ಲನ್ನ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸವಿತಾ ಆಚಾರ್ಯ ಸ್ವಾಗತ ಕೋರಿದರು. ಶ್ರೀಮತಿ ಶಿಲ್ಪಾ ಶ್ರೀ ವಂದನೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News