×
Ad

Udupi | ಬ್ರಹ್ಮಗಿರಿ- ಬನ್ನಂಜೆ ರಸ್ತೆ ಗುಂಡಿಮಯ: ದುರಸ್ತಿಗೆ ಆಗ್ರಹ

Update: 2025-11-16 18:24 IST

ಉಡುಪಿ, ನ.16: ನಗರದ ಬ್ರಹ್ಮಗಿರಿ ವೃತ್ತದಿಂದ ಬನ್ನಂಜೆ ನಾರಾಯಣ ಗುರು ವೃತ್ತವನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನಗಳು ಸಂಚರಿಸಲು ಪ್ರಯಾಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ.

ಡಾಮರು ಕಿತ್ತುಹೋಗಿದ್ದು, ಗುಂಡಿಗಳು ಬಿದ್ದುಕೊಂಡಿವೆ. ವಾಹನಗಳ ಚಾಲಕರು ಗುಂಡಿ ತಪ್ಪಿಸಲು ಹೋಗಿ, ವಾಹನ ನಿಯಂತ್ರಣ ಸಿಗದೆ ಅಪಘಾತಗಳು ಸಂಭವಿಸುತ್ತಿರುತ್ತವೆ. ಈ ರಸ್ತೆಯು ಪ್ರಮುಖ ರಸ್ತೆ ಆಗಿರುವುದರಿಂದ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ತಾಲೂಕು ಕಚೇರಿ, ಸರಕಾರಿ ಪ್ರವಾಸಿ ಬಂಗ್ಲೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ, ಹಾಗೂ ಇನ್ನಿತರ ಸರಕಾರಿ ಕಚೇರಿಗಳು ಇಲ್ಲಿವೆ.

ಧೂಳೇಳುತ್ತಿರುವ ರಸ್ತೆಯಲ್ಲಿ ನಡೆದು ಸಾಗುವ ಸಾರ್ವಜನಿಕರಿಗೆ ಕಣ್ಣಿನ ಶ್ವಾಸಕೋಶದ ತೊಂದರೆಗಳು ಬಾಧಿಸುವ ಸಾದ್ಯತೆಗಳು ಇಲ್ಲಿವೆ. ತಕ್ಷಣ ಜಿಲ್ಲಾಡಳಿತವು ಈ ರಸ್ತೆಯನ್ನು ದುರಸ್ತಿಪಡಿವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News