×
Ad

ಉಡುಪಿ: ಕಾರು ಢಿಕ್ಕಿ; ಫೋಸ್ಟ್‌ಮೆನ್‌ಗೆ ಗಾಯ

Update: 2023-09-26 18:44 IST

ಉಡುಪಿ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಪೋಸ್ಟ್ ಮ್ಯಾನ್ ಗಾಯಗೊಂಡ ಘಟನೆ ನಗರದ ಬನ್ನಂಜೆ ಸಿರಿಬೀಡು ಕಸ್ತೂರಿ ಬಿಲ್ಡಿಂಗ್ ಎದುರು ಮಂಗಳವಾರ ಮಧ್ಯಾಹ್ನ ವೇಳೆ ನಡೆದಿದೆ.

ಗಾಯಗೊಂಡವರನ್ನು ಉಡುಪಿ ಮುಖ್ಯ ಅಂಚೆ ಕಚೇರಿಯ ಪೋಸ್ಟ್‌ಮೆನ್, ಮೂಡಬೆಟ್ಟುವಿನ ನಿವಾಸಿ ನಾಗರಾಜ ಶೆಟ್ಟಿಗಾರ್ (26) ಎಂದು ಗುರುತಿಸಲಾಗಿದೆ. ಉಡುಪಿಯಿಂದ ಮಲ್ಪೆ ಕಡೆಗೆ ಹೋಗುತ್ತಿದ್ದ ಕಾರು, ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರಿಂದ ತೀವ್ರವಾಗಿ ಗಾಯಗೊಂಡ ಇವರನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News