×
Ad

ಉಡುಪಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟ: ಕೋಡಿ ಬ್ಯಾರೀಸ್ ಸೀ ಸೈಡ್ ಶಾಲಾ ತಂಡ ಪ್ರಥಮ

Update: 2025-11-09 23:19 IST

ಉಡುಪಿ: ಉಡುಪಿ ಕನ್ನರ್ಪಾಡಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಲಾದ ಉಡುಪಿ ಜಿಲ್ಲಾಮಟ್ಟದ ಎಐಸಿಎಸ್ ಅಂತರ ಶಾಲಾ 14ರ ವಯೋಮಾನದ ಬಾಲಕರ ಪುಟ್ಬಾಲ್ ಪಂದ್ಯಾವಳಿಯಲ್ಲಿ ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆ ಸಿಬಿಎಸ್‌ಇ ಇದರ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ.

ಈ ಪಂದ್ಯದಲ್ಲಿ ಮುಹಮ್ಮದ್ ರೆಹಂ ಕೋಡಿ, ಮುಹಮ್ಮದ್ ಅಯಾನ್ ಕೋಡಿ, ಮೊಹಮ್ಮದ್ ರೆಹಾನ್, ಮುಹಮ್ಮದ್ ರೆಹಾನ್ ಕೋಡಿ, ಮೊಹಮ್ಮದ್ ಶಮ್ರಾಜ್ ಸೈಫುಲ್ಲಾ, ಮೊಹಮ್ಮದ್ ಹಾಶಿಮ್ ಇಸ್ಮಾಯಿಲ್, ಮೊಹಮ್ಮದ್ ಫಾರಾನ್, ಮೊಹಮ್ಮದ್ ಫಹಾದ್, ಸಯ್ಯದ್ ಅಕೀಬ್, ಶಾಝೀರ್ ಅಬ್ದುಲ್ ಖಾದರ್,, ಮುಹಮ್ಮದ್ ಅಸ್ಮೀರ್, ಮೊಹಮ್ಮದ್ ಉಜೈರ್ ಖಾದರ್ ಭಾಗವಹಿಸಿದ್ದು ಇದರಲ್ಲಿ ಮೊಹಮ್ಮದ್ ಫಹಾದ್ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಯಶಸ್ವಿಗೆ ಕಾರಣರಾದ ತಂಡದ ಎಲ್ಲಾ ಆಟಗಾರರನ್ನು, ದೈಹಿಕ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News