×
Ad

ಉಡುಪಿ ಗ್ಯಾಂಗ್‌ ವಾರ್ ಪ್ರಕರಣದ ಆರೋಪಿಗೆ ಆರ್ಥಿಕ ನೆರವು ಆರೋಪ: ಮಹಿಳೆಯ ಬಂಧನ

Update: 2024-07-12 14:49 IST

ಉಡುಪಿ, ಜು.12: ಎರಡು ತಿಂಗಳ ಹಿಂದೆ ಉಡುಪಿಯಲ್ಲಿ ನಡೆದ ಗ್ಯಾಂಗ್‌ ವಾರ್ ಪ್ರಕರಣದ ಆರೋಪಿಗೆ ಆರ್ಥಿಕ ನೆರವು ಹಾಗೂ ಆಶ್ರಯ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಉಡುಪಿ ಪೊಲೀಸರು ಜು.11ರಂದು ಬಂಧಿಸಿದ್ದಾರೆ.

ಬಂಟ್ವಾಳದ ಸಫರಾ(35) ಬಂಧಿತ ಆರೋಪಿ ಮಹಿಳೆ. ಈಕೆ ಗ್ಯಾಂಗ್ ವಾರ್ ಪ್ರಕರಣದ ಆರೋಪಿ ಇಸಾಕ್ ಎಂಬಾತನಿಗೆ ಆಶ್ರಯ ನೀಡಿ, ಆರ್ಥಿಕ ನೆರವು ನೀಡಿದ್ದಾಳೆಂದು ದೂರಲಾಗಿದೆ. ಅದರಂತೆ ಉಡುಪಿ ನಗರ ಪೊಲೀಸರು ಆಕೆಯನ್ನು ಬಂಧಿಸಿ ಇಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News