×
Ad

ಉಡುಪಿ: ಲಿಂಗ ಸಂವೇದನೆ ಜಾಗೃತಿ ಕಾರ್ಯಕ್ರಮ ‘ಅರಿವಿನ ಪಯಣ’

Update: 2023-11-22 19:49 IST

ಉಡುಪಿ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ಮುಂದಿನ ಮಾರ್ಚ್ ತಿಂಗಳಲ್ಲಿ ಉಡುಪಿ ಯಲ್ಲಿ ಜರಗುವ ಮಹಿಳಾ ಸಮಾವೇಶದ ಪೂರ್ವಭಾವಿಯಾಗಿ ಲಿಂಗ ಸಂವೇದನೆಯ ಜಾಗೃತಿ ಕಾರ್ಯಕ್ರಮ ಉಡುಪಿ ಸುತ್ತಮುತ್ತ ನಡೆಯಿತು.

ಹಾಡು, ಕಿರುನಾಟಕ, ಕತೆ ಹೇಳುವುದು ಮತ್ತು ಸಂವಾದದ ಮೂಲಕ ಸುಮಾರು ಒಂದೂವರೆ ಗಂಟೆಗಳ ಕಾಲ ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಯಿತು.

ಈ ಕಾರ್ಯಕ್ರಮದಲ್ಲಿ, ಅಖಿಲಾ ವಿದ್ಯಾಸಂದ್ರ, ಪ್ರಭಾ ಬೆಳವಂಗಲ, ಗೌರಿ, ಲಿನೆಟ್, ಮಲ್ಲಿಕಾ ಜ್ಯೋತಿಗುಡ್ಡೆ, ಲಾವಣ್ಯ ಬಂಟ್ವಾಳ, ಶುಭಲಕ್ಷ್ಮೀ ಕಡೆಕಾರ್, ಡಾ.ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಚಂದ್ರಿಕಾ ಶೆಟ್ಟಿ, ಜಾನಕಿ ಬ್ರಹ್ಮಾವರ, ಮೇರಿ ಡಿ ಸೋಜ, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆಯೋಜಕರಾಗಿ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಮಾ ಎಸ್., ಉಡುಪಿ ಕ್ರಿಶ್ಚಿಯನ್ ಪ್ರೌಢ ಶಾಲೆಯ ಮುಖೋಪಾಧ್ಯಾಯಿನಿ ಜೋಸ್ಲಿನ್, ಮಣಿಪಾಲ ಎಸೆಸೆಲ್ಸಿ ನಂತರದ ಸರಕಾರಿ ನರ್ಸಿಂಗ್ ವಿದ್ಯಾರ್ಥಿಗಳ ವಸತಿ ನಿಲಯದ ವಾರ್ಡನ್ ಸುನೀತಾ ಸಹಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News