×
Ad

ಉಡುಪಿ ನಗರಸಭೆ ಚುನಾವಣೆ: ಪರಿಷ್ಕೃತ ಚುನಾವಣಾಧಿಕಾರಿ ನೇಮಕ

Update: 2024-08-13 19:54 IST

ಉಡುಪಿ, ಆ.13: ಉಡುಪಿ ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರಿಸಲಾಗಿದೆ. ಇದರ ಚುನಾವಣಾ ಅಧಿಕಾರಿಯಾಗಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಮಹೇಶ್‌ಚಂದ್ರ ಅವರನ್ನು ಜಿಲ್ಲಾಧಿಕಾರಿ ನೇಮಿಸಿದ್ದಾರೆ.

ನೇಮಕಗೊಂಡ ಅಧಿಕಾರಿಗಳು ಕರ್ನಾಟಕ ಪೌರಸಭೆ ನಿಯಮ 1965ರ ನಿಯಮ 01ರಿಂದ 18ರವರೆಗಿನ ನಿಯಮದಂತೆ ಚುನಾವಣೆ ನಡೆಸಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News