×
Ad

ಉಡುಪಿ| ನಮ್ಮ ನಾಡ ಒಕ್ಕೂಟ ಕೇಂದ್ರ ಸಮಿತಿ ಪದಾಧಿಕಾರಿಗಳ ಪದಗ್ರಹಣ

Update: 2026-01-27 18:49 IST

ಉಡುಪಿ, ಜ.27: ನಮ್ಮ ನಾಡ ಒಕ್ಕೂಟ(ಎನ್‌ಎನ್‌ಒ) ಕೇಂದ್ರ ಸಮಿತಿಯ ಪದಗ್ರಹಣ ಸಮಾರಂಭ ಇತ್ತೀಚಿಗೆ ಹೋಟೆಲ್ ಮಣಿಪಾಲ ಇನ್ ರಂಜಿತಾ ಪ್ಯಾಲೇಸ್ ಸಭಾಂಗಣದಲ್ಲಿ ನಡೆಯಿತು.

ನಿರ್ಗಮನ ಅಧ್ಯಕ್ಷ ಮೊಹಮ್ಮದ್ ಸಲೀಂ ನೂತನ ಅಧ್ಯಕ್ಷ ಡಾ.ರಿಝ್ವಾನ್ ಅಹ್ಮದ್ ಕಾರ್ಕಳ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಡಾ.ರಿಝ್ವಾನ್ ಅಹ್ಮದ್ ಕಾರ್ಕಳ, ಸಂಘಟನೆಯ ಭವಿಷ್ಯದ ಕಾರ್ಯ ಯೋಜನೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಯೋಜನೆಗಳು ಹಾಗೂ ಸಂಘಟನೆಯ ಬಲವರ್ಧನೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಶೇಖ್ ಇಸ್ಹಾಕ್, ಕೋಶಾಧಿಕಾರಿ ಪೀರು ಸಾಹೇಬ್ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಇನಯತುಲ್ಲಾ ಶ್ಯಾಬಂದ್ರೀ, ಉಡುಪಿ ಜಿಲ್ಲಾಧ್ಯಕ್ಷ ನಕ್ವ ಯಾಹ್ಯ, ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಕೇಂದ್ರ ಸಮಿತಿ ಸದಸ್ಯ ಮುಸ್ತಾಕ್ ಅಹಮದ್ ಬೆಳ್ವೆ, ಕೇಂದ್ರ ಸಮಿತಿ ಸದಸ್ಯರು, ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ಪದಾಧಿಕಾರಿಗಳ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಾರತ, ಯುಎಇ, ಈಜಿಪ್ಟ್ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಗಾಲ್ಫ್ ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೈದ ಅಂತಾರಾಷ್ಟ್ರೀಯ ವೃತ್ತಿಪರ ಗಾಲ್ಫ್ ಆಟಗಾರ ಸಾಬಿಕ್ ಸಲೀಂ ಬಾಜಿ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೌಲಾನಾ ಝಮೀರ್ ಅಹ್ಮದ್ ರಶಾದಿ ವರದಿ ಮಂಡಿಸಿದರು. ಉಪಾಧ್ಯಕ್ಷ ಸಲೀಂ ಬಾಜಿ ಕೈಕಂಬ ಸ್ವಾಗತಿಸಿದರು. ಉಪಾಧ್ಯಕ್ಷ ಹುಸೇನ್ ಹೈಕಾಡಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News