ಉಡುಪಿ | ಮುಂಬೈಯಲ್ಲಿ ರಸ್ತೆ ಅಪಘಾತ; ಕಲ್ಮಾಡಿಯ ಯುವಕ ಮೃತ್ಯು
Update: 2025-11-22 11:30 IST
ಉಡುಪಿ: ಕಲ್ಮಾಡಿಯ ಯುವಕನೊಬ್ಬ ಶುಕ್ರವಾರ ತಡರಾತ್ರಿ ಥಾಣೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮೃತನನ್ನು ಉಡುಪಿಯ ಕಲ್ಮಾಡಿ ಮೂಲದ ಇನಿಶ್ ಲಸ್ರಾದೊ (25) ಎಂದು ಗುರುತಿಸಲಾಗಿದೆ. ಅವರು ಮೋಟಾರ್ ಸೈಕಲ್ ಅಪಘಾತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇನಿಶ್ ಕಳೆದ ಮೂರು ವರ್ಷಗಳಿಂದ ಥಾಣೆಯಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಲ್ಮಾಡಿ ಚರ್ಚ್‌ನ ಐಸಿವೈಎಂ ಘಟಕದಲ್ಲಿ ಮತ್ತು ವಿವಿಧ ಚರ್ಚ್ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದರು.
ಮೃತರು ತಂದೆ ಅಪೊಲೊ, ತಾಯಿ ಐರೀನ್ ಮತ್ತು ಸಹೋದರಿ ಅಶ್ವಿನಿ ಲಸ್ರಾದೊ ಅವರನ್ನು ಅಗಲಿದ್ದಾರೆ.